ಪಿಎಸ್‌ಐ ಅನಿಲ್‌ರಿಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ

ಮಾಲೂರು.ನ೧೯_ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಎನ್.ಅನೀಲ್ ಅವರನ್ನು ವಾಲ್ಮೀಕಿ ನಾಯಕ ಸಂಘದ ವತಿಯಿಂದ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಗುರುಪೀಠದ ಸದಸ್ಯ ಎನ್.ವೆಂಕಟರಾಮ್ ತಾಲೂಕಿನಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ೨೦ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ನಮ್ಮ ಸಮುದಾಯದವರು ಸೇರಿದಂತೆ ಇತರೆ ಸಮುದಾಯದವರು ಠಾಣೆಗೆ ದೂರುಗಳನ್ನು ನೀಡಲು ಬಂದಾಗ ಸಹಕರಿಸಿ ಅವರಿಗೆ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುವಂತೆ ತಿಳಿಸಿದ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಮುದಾಯದ ಸಹಕಾರ ನೀಡುವುದಾಗಿ ತಿಳಿಸಿದರು,
ಅಭಿನಂದನೆ ಸ್ವೀಕರಿಸಿದ ಅನೀಲ್ ಅವರು ಮಾತನಾಡಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಉಪನಿರೀಕ್ಷಕನಾಗಿ ಅಧಿಕಾರ ಸ್ವೀಕರಿಸಿದ್ದು ಈಗಾಗಲೇ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಅದೇ ರೀತಿ ತಾಲೂಕಿನಲ್ಲಿಯೂ ಕಾನೂನು ಚೌಕಟ್ಟಿನಲ್ಲಿ ಠಾಣೆಗೆ ಬರುವ ದೂರು ದಾರರಿಗೆ ನ್ಯಾಯ ಒದಗಿಸಲಾಗುವುದು.
ಅಕ್ರಮ ಚಟುವಟಿಕೆಗಳು ನಡೆಯುವ ಬಗ್ಗೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಸಂಘ ಸಂಸ್ಥೆಗಳು ಸಾರ್ವಜನಿಕರು ಜನಪ್ರತಿನಿಧಿಗಳು ಸಹಕರಿಸುವಂತೆ ತಿಳಿಸಿದರು.
ವಾಲ್ಮೀಕಿ ನಾಯಕ ಸಂWದ ಪ್ರಧಾನ ಕಾರ್ಯದರ್ಶಿ ಟಿ.ಗುಂಡಪ್ಪ, ಪುರಸಭಾ ಸದಸ್ಯ ಸೋಸೈಟಿ ವೆಂಕಟೇಶ್, ಮದಕರಿ ನಾಯಕ ಸಂಘದ ಅಧ್ಯಕ್ಷ ಟಿ.ಶ್ರೀನಿವಾಸ್, ವಾಲ್ಮೀಕಿ ನಾಯಕ ಯುವ ವೇಧಿಕೆ ಅಧ್ಯಕ್ಷ ಟಿ.ಕೆ.ನಾಗರಾಜ್, ಹುಂಗೇನಹಳ್ಳಿ ವೆಂಕಟೇಶ್, ಶ್ರೀನಿವಾಸ್, ಶಂಕರ್, ನವೀನ್, ಮಹೇಶ್, ಕಿಷನ್ ನಾಯಕ್, ರಘು, ಮಹೇಶ್, ಇನ್ನಿತರರು ಹಾಜರಿದ್ದರು.
ಪೋಟೊ ೨. ಮಾಲೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಎನ್.ಅನೀಲ್ ಅವರನ್ನು ವಾಲ್ಮೀಕಿ ನಾಯಕ ಸಂಘದ ವತಿಯಿಂದ ಅಭಿನಂದಿಸಿದರು.
ಮಾಲೂರು : ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ದೀಪಾವಳಿ ಹಬ್ಬದ ಪ್ರಯುಕ್ತ ಕೊರೊನಾ ವಾರಿಯರ್‍ಸ್ ಹಾಗೂ ನಿವೃತ್ತ ಯೋಧರಿಗೆ ಹಮ್ಮಿಕೊಂಡಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಶ್ರೀನಿವಾಸ್ ಅವರನ್ನು ಅಭಿನಂದಿಸಿದರು.
ಬಿಜೆಪಿ ತಾ.ಅಧ್ಯಕ್ಷ ಪುರನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ, ಪುರಸಭಾ ಸದಸ್ಯ ರಾಮಮೂರ್ತಿ, ಮಾಜಿ ಉಪಾಧ್ಯಕ್ಷ ದೇವರಾಜರೆಡ್ಡಿ, ಬಿಜೆಪಿ ಜಿಲ್ಲಾ ಮಹಿಳ ಅಧ್ಯಕ್ಷೆ ಅಮುಧವೇಣು, ಪುರಸಭಾ ಮಾಜಿ ಸದಸ್ಯೆ ಭಾರತಮ್ಮ, ಗುರುನಾಥರೆಡ್ಡಿ, ಡಿ.ಎನ್.ನಾರಾಯಣಸ್ವಾಮಿ, ಪಚ್ಚಪ್ಪ, ವಿನುತ, ತೇಜಸ್, ಸುರೇಶ್, ರಾಮಮೂರ್ತಿ, ನಿವೃತ್ತ ಯೋದರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನಿತರರು ಇದ್ದರು.