ಪಿಎಸ್ಐ ಹುದ್ದೆಗೆ ಆಯ್ಕೆಯಾದ ಸಾಧಕನಿಗೆ ಸನ್ಮಾನ

ಕಾಳಗಿ. ಏ.11: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪಿಎಸ್ಐ ಹುದ್ದೆಗೆ ಆಯ್ಕೆಯಾದ ಲಷ್ಮಿಕಾಂತ ಗುತ್ತೇದಾರ ರವರಿಗೆ ಗೆಳೆಯರ ಬಳಗದಿಂದ ಸನ್ಮಾನ ಸಮಾರಂಭ ಜರಗಿತ್ತು.

ಈ ವೇಳೆ ಮಾತನಾಡಿದ ಅಮರನಾಥ ಕದಂ ಅವರು ಯಾವುದೇ ಸರಕಾರ ನೌಕರಿ ಪಡಿಯಬೇಕೆಂದರೆ ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕೆ ತಕ್ಕಂತೆ ಕಠಿಣ ಪರಿಶ್ರಮ ಪಡೆಯಬೇಕು. ಮನುಷ್ಯ ಏನನ್ನಾದರೂ ಸಾಧನೆ ಮಾಡಬೇಕಾದರೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕೆಂದು ಹೇಳಿದರು.

ಇಸ್ಮಾಯಿಲ್ ರುಸ್ತಾಮ್, ರಮೇಶ ಬಾಂಬೆ, ಶರಣು ನಾಟಿಕಾರ, ಮಾರ್ತಾಂಡ ನಾಟಿಕಾರ, ಮಹೇಬೂಬ ಗುರುಮಿಟ್ಕಲ್, ಸಿದ್ದು ಪಸರ್, ವಿಕಾಶ ಚಿಂತಕೋಟಾ,ಕಾಳು ಪುಟಾಣಿ, ಪೃಥ್ವಿ ಕಾಳಗಿ ಸೇರಿದಂತೆ ಅನೇಕರಿದ್ದರು.