
ಸಿರವಾರ,ಮಾ.೧೫- ಎಎಸ್‌ಐಯಿಂದ ಪಿಎಸ್‌ಐ ಆಗಿ ಪದೋನ್ನತಿ ಹೊಂದಿರುವ ರಾಮ್‌ಜಿ ನಾಯಕ್‌ರ ಮುಂದಿನ ಕೆಲಸ ಹಾಗೂ ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದು ಪಿಎಸ್‌ಐ ಅವಿನಾಶ ಕಾಂಬ್ಳೆ ಹೇಳಿದರು. ಸಿರವಾರ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸಿ ಪದೋನ್ನತಿ ಹೊಂದಿರುವ ರಾಮಜಿ ನಾಯ್ಕ್ ಅವರಿಗೆ ಠಾಣೆಯಿಂದ ಬಿಳ್ಕೊಡುಗೆ ಮಾಡಲಾಯಿತು. ನಂತರ ಮಾತನಾಡಿದ ಅವರು ಯಾವುದೇ ಇಲಾಖೆ ಇರಲಿ ಕೂಡುವುದು ಆಕಸ್ಮಿಕ ಅಗಲಿಕೆ ಅನಿವಾರ್ಯ. ಈಗ ಅವರು ಪಿಎಸ್‌ಐ ಆಗಿರುವ ಅವರ ಮುಂದಿನ ಜೀವನ ಆರೋಗ್ಯದಿಂದ ಇರಲಿ.
ತಮ್ಮ ಮಕ್ಕಳಿಗೂ ಸಹ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಜನತೆ ಇಂತವರನು ನೋಡಿ ಆರೋಗ್ಯದ ಬಗ್ಗೆ ತಿಳಿದುಕೊಳಬೇಕು. ನಾನು ಠಾಣೆಗೆ ಬಂದು ೨ ತಿಂಗಳಾಗಿದೆ, ಅವರು ಒಂದು ದಿನವು ಸಹ ದಣಿವು ಮಾಡಿಕೊಳದೆ ಕಾರ್ಯನಿರ್ವಹಿಸಿದ್ದಾರೆ ಎಂದರು. ವಾಣಿಜ್ಯೋದ್ಯಮಿ ಜಿ.ಲೋಕರೇಡ್ಡಿ ಮಾತನಾಡಿ ರಾಮಜಿ ಅವರು ಪೊಲೀಸ್ ಆಗಿದ್ದರು ಒಂದು ದಿನವು ಬೈಗಳ ಮಾತನಾಡಿಲ್ಲ, ಠಾಣೆಗೆ ಬರುವವರಿಗೆ ತಿಳಿ ಹೇಳಿ ಸಮಾದಾನ ಮಾಡಿ ಕಳಿಸುತ್ತಿದ್ದರು. ತಮ್ಮ ಕಾರ್ಯದ ಒತ್ತಡದ ನಡುವೆಯೂ ಮಕ್ಕಳ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಆಯುಷ್ಯ ಅರೋಗ್ಯ ಕರುಣಿಸಲಿ ಎಂದರು.
ಪಿಎಸ್‌ಐ ರಾಮ್‌ಜಿ ನಾಯಕ್, ಪ.ಪಂ ಸದಸ್ಯ ಕೃಷ್ಣನಾಯಕ, ಚಂದ್ರಶೇಖರ ಯಲಗೇರಿ ಮಾತನಾಡಿದರು. ಕಾಂಗ್ರೆಸ್ ಯುವ ಮುಖಂಡ ರಮೇಶದರ್ನಕರ್, ಶೇಷಯ್ಯ ನವಲಕಲ್, ದಾನಪ್ಪ, ಮಲ್ಲಿಕಾರ್ಜುನ ಜೇಗರಕಲ್, ಕೃಷ್ಣಮೂರ್ತಿ ಶೇಟಿ. ಕೆ.ರಘು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.