ಔರಾದ್ :ಜೂ.5: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‍ಐ ಆಗಿ ಮಡಿವಾಳಪ್ಪ ಬಾಗೋಡಿ ಅಧಿಕಾರ ವಹಿಸಿಕೊಂಡರು. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‍ಐ ಉಪೇಂದ್ರಕುಮಾರ ವರ್ಗಾವಣೆಯಾಗಿದ್ದರಿಂದ ಸ್ಥಾನ ತೆರವಾಗಿತ್ತು. ಬೀದರನಲ್ಲಿ ಪಿಎಸ್‍ಐ ಆಗಿದ್ದ ಮಡಿವಾಳಪ್ಪ ಅವರನ್ನು ಔರಾದ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಾರ್ವಜನಿಕರು ಉತ್ತಮ ಸಹಕಾರ ನೀಡಬೇಕು. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಅಪರಾಧ ತಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜನರಿಗೆ ಕಾನೂನು ಅರಿವಿನ ಜಾಗೃತಿ ಮೂಡಿಸುತ್ತೇವೆ. ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಠಾಣೆಗೆ ಸಂಪರ್ಕಿಸಬೇಕು ಎಂದು ನೂತನ ಪಿಎಸ್‍ಐ ಮಡಿವಾಳಪ್ಪ ಬಾಗೋಡಿ ಮನವಿ ಮಾಡಿದ್ದಾರೆ.