ಪಿಎಸ್‍ಐ ಪಿಸ್ತೂಲ್ ಕಸಿದು ಮರವೇರಿದ ಕಳ್ಳ

ಕಲಬುರಗಿ,ಜು.17-ಬಂಧಿಸಲು ಹೋದ ವೇಳೆ ಕುಖ್ಯಾತ ಕಳ್ಳನೋರ್ವ ಪಿಎಸ್‍ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ನಿನ್ನೆ ರಾತ್ರಿ (ಜುಲೈ 16) ಅಫಜಲಪುರ ಪಟ್ಟಣದಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಖಾಜಪ್ಪ ಎನ್ನುವ ಕುಖ್ಯಾತ ಕಳ್ಳ ಅಫಜಲಪುರ ಪಿಎಸ್‍ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿದ್ದಾನೆ.
ಸಿಸಿಬಿ ಪೆÇಲೀಸರು ಖಾಜಪ್ಪ ಎಂಬಾತನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಬಂದಿದ್ದರು. ಈ ವೇಳೆ ಪಿಎಸ್‍ಐ ಭೀಮರಾಯ್ ಅವರ ಸರ್ವಿಸ್ ರಿವಾಲ್ವರ್ ತಗೆದುಕೊಂಡ ಪರಾರಿಯಾಗಿದ್ದಾನೆ.
ಖಾಜಪ್ಪ ವಿರುದ್ಧ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧ ಪೆÇಲೀಸ್ ಠಾಣೆಗಳಲ್ಲಿ 20 ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಕಾರಿನಲ್ಲಿ ಕೂತಿದ್ದ ಖಾಜಪ್ಪನನ್ನು ಪೆÇಲೀಸ್ ತಂಡ ಹಿಡಿಯಲು ಹೋಗಿತ್ತು. ಈ ವೇಳೆ ಪಿಎಸ್‍ಐ ತನ್ನ ಸರ್ವಿಸ್ ಪಿಸ್ತೂಲ್‍ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಈ ಸಮಯದಲ್ಲಿ ಖಾಜಪ್ಪ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದಾನೆ.

ಬಳಿಕ ಕಳೆದ ಇಡೀ ಪೆÇಲೀಸರ ತಂಡ ಕಾರ್ಯಚರಣೆ ನಡೆಸಿದರೂ ಖಾಜಪ್ಪ ಸಿಕ್ಕಿಲ್ಲ. ಕಳ್ಳ ಪುಲ್ ಲೋಡೆಡ್ ಸರ್ವಿಸ್ ಪಿಸ್ತೂಲ್ ಸಮೇತ ಪರಾರಿಯಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಅಫಜಲಪುರ ಠಾಣೆಗೆ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಗನ್ ಸಮೇತ ಮರವೇರಿ ಕುಳಿತ ಕಳ್ಳ !
ಬಂಧಿಸಲು ಹೋದ ವೇಳೆ ಪಿಎಸ್‍ಐ ಬಳಿ ಇದ್ದ ಸರ್ವಿಸ್ ರಿವಾಲ್ವಾರ್ ಕಸಿದುಕೊಂಡು ಪರಾರಿಯಾಗಿರುವ ಕಳ್ಳ ಖಾಜಪ್ಪ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಹೊರವಲಯದಲ್ಲಿನ ಜಮೀನು ಒಂದರಲ್ಲಿನ ಮರವೇರಿ ಕುಳಿತಿದ್ದಾನೆ.
ಗನ್ ಸಮೇತ್ ಕಳ್ಳ ಖಾಜಪ್ಪ ಮರವೇರಿ ಕುಳಿತ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಕಳ್ಳ ಕುಳಿತ ಮರದ ಸುತ್ತ ಸುತ್ತುವರೆದಿದ್ದಾರೆ. ಆತನನ್ನು ಮರದಿಂದ ಕೆಳಗಿಳಿಸಿ ಬಂಧಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ಈ ಸುದ್ದಿ ಎಲ್ಲೆಡೆ ಹರಡಿ ಗ್ರಾಮಸ್ಥರು ಕಿರಾತಕ ಕಳ್ಳನನ್ನು ನೋಡಲು ಜಮೀನು ಸುತ್ತ ಜಮಾವಣೆಯಾಗಿದ್ದಾರೆ.