ಪಿಎಸ್ಐ ನೇಮಕಾತಿ ಅಕ್ರಮ:ಕೋರ್ಟ್ ಮುಂದೆ ಮತ್ತೊಬ್ಬ ಆರೋಪಿ ಶರಣಾಗತಿ

ಬೆಂಗಳೂರು, ಸೆ.15- ಪಿಎಸ್ ಐ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಓರ್ವ ಆರೋಪಿ ನ್ಯಾಯಾಲಯದ‌ ಮುಂದೆ ಶರಣಾಗಿದ್ದಾನೆ.
ಹಗರಣದಲ್ಲಿ ಶಾಮೀಲಾಗಿ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಅನುಮತಿ ನೀಡಿದೆ.ಇದರ ಬೆನ್ನಲ್ಲೇ ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿ ಶರಣಾಗಿದ್ದಾನೆ.
ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಕುಣಿಗಲ್ ಮೂಲದ ಸಿದ್ದರಾಜು ಹಾಗೂ ಬೋರೆಗೌಡ ಸಂಬಂಧಪಟ್ಟ ಅಧಿಕಾರಿಗಳಿಂದ ಸರ್ವೇ ಮಾಡಿಸಿ ವಶಕ್ಕೆ ಪಡೆದುಕೊಳ್ಳಲು ಸಿಐಡಿ ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದರು‌.
ಪಿಎಸ್ಐ ಅಕ್ರಮ ಜಾಲದಲ್ಲಿ ಹೈಗ್ರೌಂಡ್ಸ್ ಕೇಸ್‌ನಲ್ಲಿ ಸಿದ್ದರಾಜು ಹಾಗೂ ಬೋರೆಗೌಡ 36 ಹಾಗೂ 37ನೇ ಆರೋಪಿಗಳಾಗಿದ್ದಾರೆ.
ಇಬ್ಬರು ಆರೋಪಿಗಳು ಎಫ್​ಡಿಎ ಹರ್ಷನೊಂದಿಗೆ ಮಧ್ಯವರ್ತಿಗಳಾಗಿ ಗುರುತಿಸಿಕೊಂಡಿದ್ದರು. ಇಬ್ಬರು ಸೇರಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದರು.
ಈ ಬೆಳವಣಿಗೆ ಮಧ್ಯೆ ಬೋರೆಗೌಡ ಕೋರ್ಟ್ ಮುಂದೆ ಶರಾಣಾಗಿದ್ದಾನೆ. ಪಿಎಸ್ಐ ಪ್ರಕರಣದಲ್ಲಿ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಅಧಿಕಾರಿಗಳು, ಮಧ್ಯವರ್ತಿ ಗಳು ಹಾಗೂ ಆಭ್ಯರ್ಥಿಗಳು ಸೇರಿ 90 ಮಂದಿ ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ.