
ಗಬ್ಬೂರು,ಮಾ.೩೧- ಅನಧಿಕೃತವಾಗಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯೊರ್ವನ ಮೇಲೆ ಗಬ್ಬೂರು ಪಿಎಸ್‌ಐ ದಾಳಿ ನಡೆಸಿ ಆತನನ್ನು ಬಂಧಿಸಿ ೧೪ಕೆ.ಜಿ೧೦ ಗ್ರಾಂ ಹಸಿ ಗಾಂಜಾ ೫೦-೬೦ ಗಿಡಗಳು ಜಪ್ತಿಮಾಡಿಕೊಂಡ ಘಟನೆ ಹೇಮನಾಳ ಸೀಮಾದ ಸರ್ವೆ ನಂಬರ್ ೧೮೮ ರ ಹೊರವಲಯದ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಹೇಮನಾಳ ಗ್ರಾಮದ ನಿಂಗಪ್ಪ ತಂದೆ ಮರಿಯಪ್ಪ ವಯಸ್ಸು(೪೫) ಬೆಂಡಗಂಬಳಿ ಬಂಧಿತ ಆರೋಪಿಯಾಗಿದ್ದಾನೆ.
ಈತನು ಹೇಮನಾಳ ಹೊರವಲಯದ ಜಮೀನಿನಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಪ್ರಕಾಶ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಎನ್.ಡಿ.ಪಿ.ಎಸ್ ಕಾಯ್ದೆ ೧೯೮೫ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಂದರ್ಭದಲ್ಲಿ ಗೆಜೆಟೆಡ್ ಅಧಿಕಾರಿ, ತಾಲೂಕು ಕಾರ್ಯನಿರ್ವಾಹಕ ದಂಢಾಧಿಕಾರಿ, ತಹಶಿಲ್ದಾರರ ದೇವದುರ್ಗ ಉಪಸ್ಥಿತರಿದ್ದರು.