ಪಿಎಸ್‍ಐ,ಸಿಬ್ಬಂದಿ ಸಾವು: ಸಚಿವ ಖೂಬಾ ಶೋಕ

ಬೀದರ ಜು 25: ಆಂಧ್ರಪ್ರದೇಶದ ಚಿತ್ತೂರ ಬಳಿನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಸ್ಟೇಷನ್‍ನಲ್ಲಿ ಪಿ ಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ಅವಿನಾಶ್ ಯಾದವ (ರೊಳಾ) ಹಾಗೂ ಇವರ ಜೊತೆ ಇನ್ನೂ ಇಬ್ಬರು ಸಿಬ್ಬಂದಿಗಳು ಮೃತರಾಗಿರುವ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಹಾಗೂಇವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿ ಇವರಕುಟುಂಬಕ್ಕೆ, ಬಂಧು ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಸಮಾಜಮುಖಿ ಕಾರ್ಯಗಳಿಗಾಗಿ, ಸಮಾಜದಲ್ಲಿ ಪ್ರತಿ ಕ್ಷಣನಮಗಾಗಿ ದುಡಿಯುವ ಪೊಲೀಸ್ ಇಲಾಖೆಗೆ ಈ ದಿನ ಅತಿ ದುರದೃಷ್ಟಕರ ದಿನವಾಗಿದೆ. ಸೇವೆಯಲ್ಲಿದ್ದ ಇವರುಗಳನ್ನು ನಮ್ಮ ಸರ್ಕಾರ ಎಲ್ಲಾ ಸಕಲ ಗೌರವಗಳು ನೀಡಲಿದೆ ಹಾಗೂ ಅವರ ಕುಟುಂಬಗಳ ಜೊತೆ ನಿಲ್ಲಲಿದೆ ಎಂದು ಕೇಂದ್ರ ಸಚಿವರು ಭರವಸೆಯನ್ನು ನೀಡಿದ್ದಾರೆ.