ಪಿಎಲ್ ಡಿ ಬ್ಯಾಂಕ್ ನಿಂದ ಉತ್ತಮ ಕೃಷಿ, ಗ್ರಾಹಕರಿಗೆ ಸನ್ಮಾನ


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.17 ಪಟ್ಟಣದ ಹಳೇವೂರಿನ ಸಮುದಾಯ ಭವನದಲ್ಲಿ ನಡೆದ ಪಿಎಲ್ ಡಿ ಬ್ಯಾಂಕ್ ವಾರ್ಷಿಕ ಮಹಾಜನ ಸಭೆಯಲ್ಲಿ ಉತ್ತಮ ಕೃಷಿಕರು ಹಾಗೂ ಕೃಷಿ ಗ್ರಾಹಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉತ್ತಮ ಕೃಷಿಕರಾಗಿ ಚಿಲುಗೋಡು ಬಾಣದ ಶಿವಪ್ಪ, ನೆಲ್ಕುದ್ರಿ ನಂದಿ ವಿರೂಪಾಕ್ಷ, ಉತ್ತಮ ಗ್ರಾಹಕರಾಗಿ ಯೂಸುಫ್, ವೈ ಮಲ್ಲಿಕಾರ್ಜುನ್, ಕರಬಸಪ್ಪ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಳ್ಳಿ  ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಗಂಗಾಧರ್, ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಡಿ ಮಂಜುನಾಥ್, ಇ ಕೆ ಕೃಷ್ಣಮೂರ್ತಿ, ಬ್ಯಾಂಕಿನ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಬ್ಯಾಂಕ್ ಕ್ಷೇತ್ರ ಅಧಿಕಾರಿ ಸುಮಿತ್ರ, ಸಿಬ್ಬಂದಿಗಳಾದ ಕುಮಾರಸ್ವಾಮಿ ನಾಗರಾಜ ಇತರರಿದ್ದರು.