ಪಿಎಲ್‌ಡಿ ಬ್ಯಾಂಕ್ ಪ್ರಶಾಂತ್ ನೂತನ ಅಧ್ಯಕ್ಷ

ಕನಕಪುರ.ನ೨೧:ಇಲ್ಲಿನ ಎಂಎಚ್‌ಎಸ್ ರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ವಡೇರಹಳ್ಳಿ ಪ್ರಶಾಂತ್ ಅಧ್ಯಕ್ಷರಾಗಿ ಆಯ್ಕೆಯಾದರು.
ಹಿಂದಿನ ಅವಧಿಯ ಅಧ್ಯಕ್ಷ ಹುಣಸನಹಳ್ಳಿ ರಮೇಶ್ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸಹಕಾರ ಇಲಾಖೆ ಡಿ.ಎಂ.ಮಹಮ್ಮದ್ ನದೀಂ ಶನಿವಾರ ಚುನಾವಣೆ ನಡೆಸಿದರು.
ಪ್ರಶಾಂತ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಬ್ಯಾಂಕ್‌ನ ಕಾರ್ಯದರ್ಶಿ ನಾಗೇಂದ್ರ ಸಹಾಯಕಾರಿ ಕೆಲಸ ಮಾಡಿದರು. ಉಪಾಧ್ಯಕ್ಷ ಭದ್ರಗಿರಿಯಪ್ಪ ಸೇರಿದಂತೆ ಎಲ್ಲಾ ನಿರ್ದೇಶಕರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ಕಾಂಗ್ರೆಸ್ ಮುಖಂಡರಾದ ಮುನಿಹುಚ್ಚೇಗೌಡ, ಪುಟ್ಟಮಾದು, ಕಚ್ಚುವನಹಳ್ಳಿ ವಿಜೇಂದ್ರ, ತೋಟಳ್ಳಿ ರಂಗಣ್ಣ, ಕೊಳಗೊಂಡನಹಳ್ಳಿ ಶಿವರಾಜು, ರವೀಂದ್ರ, ಶಿವಕುಮಾರ್, ದಿನೇಶ್, ಸುರೇಶ್, ಮಧು, ಉಮೇಶ್ ಮೊದಲಾದವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.