ಪಿಎಫ್ ನೀಡದೇ ವಂಚನೆ ಕ್ರಮಕ್ಕೆ ಸಚಿವರಿಗೆ ಮನವಿ

ಕಲಬುರಗಿ:ಜೂ.9: ಜಿಮ್ಸ್ ಆಸ್ಪತ್ರೆಯ 250 ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಇಎಸ್‍ಟಿ/ಇಪಿಎಫ್ ನೀಡದೆ ವಂಚಿಸಿರುವ ನಿರ್ದೇಶಕರ ವಿರುದ್ಧ ಕನ್ನಡಿಗರ ಸೇವಾದಳ ಕರ್ನಾಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಕುಮಾರ ಎಮ್. ಬಡಿಗೇರ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಮತ್ರ ಸಲ್ಲಿಸಿದರು.

ಜಿಲ್ಲೆಯ ಜೇಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಕವಿತಾ ಪಾಟೀಲ ರವರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ಟಾಫ್ ನರ್ಸ ಹಾಗೂ “ಡಿ” ಗ್ರೂಪ್ ನ ನೌಕರರಿಗೆ ಇಎಸ್‍ಟಿ/ಇಪಿಎಫ್ ನೀಡದೆ ವಂಚನೆ ಮಾಡಲಾಗಿರುವ ಸಂಗತಿ ತಾವೇ ಒಪ್ಪಿಕೊಂಡಿರುತ್ತಾರೆ.

ದಿನಾಂಕ:09.12.2022 ರಂದು ನಮ್ಮ ಸಂಘಟನೆಯಿಂದ ದೂರು ಸಲ್ಲಿಸಿದ್ದು, ಈಗ ಮೇಲ್ನೋಟಕ್ಕೆ ಸಮಯ ಕಾಲಾವಕಾಶ ನೀಡಬೇಕೆಂದು ಮಾನ್ಯ ಆಯುಕ್ತರು ಆರೋಗ್ಯ ಸೌಧ ಬೆಂಗಳೂರು ರವರು ಮನವರಿಕೆ ನೀಡಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಇಎಸ್‍ಟಿ/ಇಪಿಎಫ್ ಸರಿಯಾಗೆ ಜಮೆ ಮಾಡಿದರೆ ಇಷ್ಟೊಂದು ಸಮಯ ಪಡೆಯಬೇಕಾಗಿರಲಿಲ್ಲ ಹಾಗೂ ನೌಕರರಿಗೂ ವಂಚಿಸುತ್ತಾ ಇರಲಿಲ್ಲ. ಕಾರ್ಮಿಕರ ಕಾನೂನು ಅಡಿಯಲ್ಲಿ ಹಾಗೂ ಭಾರತ ಸರ್ಕಾರದ ಅಧೀನದಲ್ಲಿ ಪಡೆದಿರುವ ಇಎಸ್‍ಟಿ/ಇಪಿಎಫ್ ನೀಡದೆ ವಂಚನೆ ಮಾಡಿರುವ ಡಾ. ಕವಿತಾ ಪಾಟೀಲ_ರವರಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ನಷ್ಠವಾಗಿದ್ದು, ಕೂಡಲೇ ಸದರಿಯವರನ್ನು ಅಮಾನತ್ತು ಗೊಳಿಸಬೇಕು. ಹಾಗೇಯೆ 250ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.