ಪಿಎಫ್‍ಐ, ಸಿಎಫ್‍ಐ,ಸಿಡಿಪಿಐ ಸಂಘಟನೆ ನಿಷೇಧ ಆಗ್ರಹಿಸಿ ಪ್ರತಿಭಟನೆ

ಇಂಡಿ: ಜು.31:ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು ಪಿಎಫ್‍ಐ, ಸಿಎಫ್‍ಐ,ಸಿಡಿಪಿಐ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನಗರ ಕಾರ್ಯದರ್ಶಿ ಈರಣ್ಣ ಸಿಂದಗಿ ಮಾತನಾಡಿ ರಾಜ್ಯದಲ್ಲಿ ಪದೇ ಪದೇ ಇಂತಹ ಕೊಲೆ ಪ್ರಕರಣಗಳು ನಡೆಯುತ್ತಿದ್ದು ಗೃಹ ಇಲಾಖೆ ಪ್ರಶ್ನಿಸುವಂತೆ ಆಗಿದೆ.ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಎಬಿವಿಪಿ ಹಿರಿಯ ಕಾರ್ಯಕರ್ತ ಶಿವಾಜಿ ಜಾಧವ, ನಗರ ಸಹ ಕಾರ್ಯದರ್ಶಿ ಪ್ರಭು ಕಟ್ಟಿಮನಿ, ಗಣೇಶ ಹಂಜಗಿ,ಸಚೀನ ಧನಗೊಂಡ, ರವಿ ಜಾಧವ, ಶಕ್ತಿ ಮಹೀಂದ್ರಕರ, ಸಾವಿತ್ರಿ ಮುಡಿಗೆ, ಅಶ್ವಿನಿ ಪಾಂಡ್ರೆ, ಭಾಗ್ಯಶ್ರೀ ಬಿರಾದಾರ, ಸೌಮ್ಯ, ಪಲ್ಲವಿ ಮತ್ತಿತರಿದ್ದರು.

ತಹಸೀಲ್ದಾರ ದಾನಯ್ಯ ಹಿರೇಮಠರವರಿಗೆ ಮನವಿ ಸಲ್ಲಿಸಿದರು.