ಪಿಎಫ್‌ಐ, ಎಸ್‌ಡಿಪಿಐ ಸೇವಾ ಭಾರತ ಸಂಘಟನೆ ನಿಷೇಧಿಸಲು ಒತ್ತಾಯ

ಲಿಂಗಸುಗೂರು.ಆ.೦೬-ಪಿಎಫ್‌ಐ ಎಸ್‌ಡಿಪಿಐ ಹಾಗೂ ಸೇವಾ ಭಾರತ ಸಂಘಟನೆ ನಿಷೇಧಿಸಲು ಶ್ರೀ ರಾಮಸೇನೆ ಲಿಂಗಸುಗೂರ ತಾಲ್ಲೂಕು ಘಟಕ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಸಹಾಯಕ ಆಯುಕ್ತರು ಇವರ ಮೂಲಕ ಮನವಿ ಸಲ್ಲಿಸಿದರು.
ಪಿಎಫ್‌ಐ ಎಸ್‌ಡಿಪಿಐ ಹಾಗೂ ಸೇವಾ ಭಾರತ. ಸಂಘಟನೆಗಳ ಗುರಿ ಭಾರತವನ್ನು ೨೦೧೭ ರಲ್ಲಿ ಇಸ್ಲಾಮಿಕರಣ ಗೊಳಿಸುವುದು. ಸಂವಿಧಾನ, ರಾಷ್ಟ್ರಧ್ವಜ, ದಲಿತರನ್ನು ಮುಂಗೆಯಲ್ಲಿ ಉಪಯೋಗಿಸಿ ಇಸ್ಲಾಂ ರಾಷ್ಟ್ರ ಪೋಷಿಸುವುದು.ದೇಶ ದ್ರೋಹಕ್ಕಾಗಿ ಬರಾಕ ಸೈನಿಕ ಶಕ್ತಿಯನ್ನು ಪಿಎಫ್‌ಐ ನಿರ್ಮಿಸಿ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯ ಹಾಗೂ ಮಾಜಿ ಮುಖ್ಯಮಂತ್ರಿ ಆಯ್ಯುಷನ್ ಇಬ್ಬರೂ ಪಿ.ಎಫ್.ಐ ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದ ಕಾರಣ ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ.
ದೇಶದ ಸಿಎಎ,ಎನ್‌ಆರ್‌ಸಿ ರೈತರ ಹೋರಾಟ ೨೭ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿಂಸಾತ್ಮಕ ಗಲಭೆಗಳಲ್ಲಿ ಪಿ.ಎಫ್.ಐ ಎಸ್.ಡಿ.ಪಿ.ಐ.ಪಾತ್ರ ವಿದ್ದು
ದೇಶದಲ್ಲಿ ಹಾಗೂ ಕರ್ನಾಟಕವೂ ಸೇರಿ ಇತರ ರಾಜ್ಯಗಳಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಬಹುತೇಕ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಕೈವಾಡವಿದೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚು ಪಿಎಫ್‌ಐ ಸಿದ್ದಗೊಳಿಸಿದ್ದು. ಬಯಲಾಗಿದೆ.
ಈ ಮೇಲಿನ ಕಾರಣಗಳಿಂದಾಗಿ ದೇಶದ ಸುರಕ್ಷತೆಗೆ ಹಾಗೂ ಹಿಂದೂಗಳ ಭದ್ರತೆಗೆ ಪಿಎಫ್‌ಐ ಹಾಗೂ ಎಸ್‌ಡಿಪಿಐ, ಸಂಘಟನೆಗಳನ್ನು ಕೊಡಲೇ ನಿಷೇಧಿಸಬೇಕೆಂದು ಶ್ರೀ ರಾಮಸೇನೆ ಲಿಂಗಸುಗೂರ ತಾಲ್ಲೂಕು ಘಟಕದ ಸಂಘಟನೆಯು ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷರು, ಮಂಜುನಾಥ, ಪ್ರಭು ಗಸ್ತಿ, ಸಾಗರ, ಭೀಮಣ್ಣ, ಚಂದ್ರಶೇಖರ, ಮಹೆಶ ಅನ್ವರಿ, ರಮೇಶ ಮಡಿವಾಳ, ಮನು ಸುರೇಶ ಗೌಡ ಉಪಸ್ಥಿತರಿದ್ದರು.