ಪಿಎಚ್‍ಡಿಯಲ್ಲಿ ಚಿನ್ನದ ಪದಕ ಪಡೆದ ಡಾ.ರಘುವೀರ್‍ಗೆ ಸನ್ಮಾನ

ಚಿಂಚೋಳಿ,ಜ.12- ಪಿಎಚ್‍ಡಿ ಚಿನ್ನದ ಪದಕ ಪಡೆದಿರುವ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಡಾ. ರಘುವೀರ್ ಅವರಿಗೆ ಕೃಷಿ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗಷ್ಟೇ ರಾಯಚೂರುನಲ್ಲಿ ಕೃಷಿ ವಿಶ್ವ ವಿದ್ಯಾಲಯ ನಡೆದ 10 ನೇ ಘಟಿಕೋತ್ಸವದಲ್ಲಿ ಪಿ. ಹೆಚ್. ಡಿ ಪದವಿ ಪಡೆದುಕೊಂಡಿರುವ ಡಾ. ರಘುವೀರ್ ಅವರು, ಬೇಸಾಯ ಶಾಸ್ತ್ರ ವಿಭಾಗದ ಡಾ. ಬಿ. ಕೆ. ದೇಸಾಯಿ ಅವರ ಮಾಗ9ದಶ9ನದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡಿಸಿದ ಅವರಿಗೆ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಎನ್.ಕಟ್ಟಿಮನಿ ಅವರು, ಚಿನ್ನದ ಪದಕ ಪ್ರದಾನ ಮತ್ತು ಪಿಎಚ್‍ಡಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದರು.
ಪಿಎಚ್‍ಡಿ ಪದವಿ ಪಡೆದ ಡಾ.ಕೆ.ಎನ್.ಕಟ್ಟಿಮನಿ ಅವರನ್ನು ಚಿಂಚೋಳಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಅನಿಲ್ ಕುಮಾರ ರಾಠೋಡ. ಅವರು ಸನ್ಮಾನ ಮಾಡಿ ಅವರಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ. ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ರಾಥೋಡ್. ಚಿಂಚೋಳಿಯ ಪಿಎಸ್‍ಐ ರಾಜಶೇಖರ್ ರಾಥೋಡ್. ಗಂಗಾಧರ ಬಿರಾದಾರ. ಭೀಮರೆಡ್ಡಿ, ಮಸ್ತಾನ್ ಪಟೇಲ್. ಸುಶೀಲ್ ಸಿಂಧೆ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿವರ್ಗ ದವರು ಉಪಸ್ಥಿತರಿದ್ದರು.