ಪಿಎಚ್‍ಡಿ ಪದವಿ

ಹುಬ್ಬಳ್ಳಿ,ಮಾ8 : ಇಲ್ಲಿನ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಯದ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯನಿರ್ವಹಿಸುತ್ತಿರುವ ಗಂಗಾಧರ ವಿ.ಮುದ್ದಾಪುರ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ಭೌತಶಾಸ್ತ್ರ ವಿಷಯದಲ್ಲಿ ‘ಸ್ಪೆಕ್ಟ್ರೋಸ್ಕೋಪಿಕ್ ಪ್ರಾಪರ್ಟೀಸ್ ಆಫ್ ಸಮ್ ಹಿಟೆರೋಸೈಕ್ಲಿಕ್ ಲೇಸರ್ ಡೈಸ್’ ಎನ್ನುವ ಮಹಾ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ. ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಭೌತಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ. ಎನ್.ಆರ್.ಪಾಟೀಲ ಅವರು ಮಾರ್ಗದರ್ಶಕರು ಹಾಗೂ ಬೆಂಗಳೂರಿನ ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡಾ. ರವೀಂದ್ರ ಮೆಳವಂಕಿ ಅವರು ಸಹ ಮಾರ್ಗದರ್ಶಕರಾಗಿದ್ದರು.