ಪಿಎಚ್‍ಡಿ ನೋಂದಣಿ: ಸಿಯುಕೆ ಸ್ಪಷ್ಟೀಕರಣ

ಕಲಬುರಗಿ,ಮಾ.27: ಪಿಎಚ್‍ಡಿ ಶಿಕ್ಷಣದಲ್ಲಿ ಶೈಕ್ಷಣಿಕ ಮಾನದಂಡಗಳು ಮತ್ತು ನಿಬಂಧನೆಗಳನ್ನು ಎತ್ತಿಹಿಡಿಯಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಬದ್ಧವಾಗಿದ್ದು ಆ ನಿಟ್ಟಿನಲ್ಲಿ ಐದು ವರ್ಷಗಳ ಕಾಲಮಿತಿಯನ್ನು ಮುಗಿಸದವರ ಪಿಎಚ್‍ಡಿ ನೋಂದಣಿಯು ಸ್ವಯಂಚಾಲಿತವಾಗಿ ರದ್ದುಗೊಳ್ಳುವ ಕುರಿತು ಮಾ. 22 ರಂದು ಸುತ್ತೋಲೆಯನ್ನು ಹೊರಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಕುಲಸಚಿವರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವ್ಯವಹಾರಗಳ ನಿರ್ವಣೆಗೆ ಸಂಬಂದಿಸಿದ ಆರ್ಡಿನೆನ್ಸ್ ನಂ. 54, ಸೆಕ್ಷನ್ 28(1)(ಡಿ) ಪ್ರಕಾರ, ಪಿಎಚ್.ಡಿ. ಅಭ್ಯರ್ಥಿಗಳು ದಾಖಲಾತಿ ದಿನಾಂಕದಿಂದ ಪ್ರಬಂಧ ಸಲ್ಲಿಕೆಯನ್ನು ಒಳಗೊಂಡಂತೆ ಎಂಟು ಸೆಮಿಸ್ಟರ್‍ಗಳಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಬೇಕು. ಒಂದುವೇಳೆ ಸಮಯದ ವಿಸ್ತರಣೆ ಬೇಕಾದಲ್ಲಿ ಅಭ್ಯರ್ಥಿಯ ಔಪಚಾರಿಕ ಮನವಿಯ ಆಧಾರದ ಮೇಲೆ ಡಾಕ್ಟರಲ್ ರಿಸರ್ಚ್ ಕಮಿಟಿ (ಆಖಅ) ಮತ್ತು ಕಮಿಟಿ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಮತ್ತು ರಿಸರ್ಚ್ (ಅಂSಖ) ನ ಸಲಹೆಯ ಮೇರೆಗೆ ಎರಡು ಹೆಚ್ಚುವರಿ ಸೆಮಿಸ್ಟರ್‍ಗಳವರೆಗೆ ಸಮಯ ನೀಡಲಾಗುತ್ತದೆ. ಅಂದರೆ ಒಟ್ಟಾರೆಯಾಗಿ ನೋಂದಣಿಯಾದ ದಿನದಿಂದ ಐದು ವರ್ಷಗಳಲ್ಲಿ ಸಂಶೋಧನಾ ಕಾರ್ಯ ಮೂಗಿಸಿ ಪ್ರಬಂಧ ಸಲ್ಲಿಸಬೇಕು. ಇಲ್ಲವಾದಲ್ಲಿ ಅವರ ನೋಂದಣಿಯು ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ.
ದಾಖಲೆಗಳನ್ನು ಪರಿಶೀಲಿಸಲಾಗಿ ಜುಲೈ/ಆಗಸ್ಟ್ 2018 ರಲ್ಲಿ ಮತ್ತು ಅದಕ್ಕಿಂತಲೂ ಪೂರ್ವದಲ್ಲಿ ಪ್ರವೇಶ ಪಡೆದಿರುವ ಕೆಲ ಸಂಶೋಧನಾ ವಿದ್ಯಾರ್ಥಿಗಳು ಜುಲೈ/ಆಗಸ್ಟ್ 2023 ರ ವೇಳೆಗೆ ಮಂಜೂರು ಮಾಡಲಾದ ಎರಡು ಸೆಮೆಸ್ಟರಗಳ ವಿಸ್ತರಣೆಯನ್ನು ಒಳಗೊಂಡಂತೆ ನಿಗದಿತ ಹತ್ತು-ಸೆಮಿಸ್ಟರ್ ಮಿತಿಯನ್ನು ಮೀರಿದ್ದನ್ನು ಗಮನಿಸಲಾಗಿದೆ.
22.03.24 ರಂದು ಹೊರಡಿಸಲಾದ ಸುತ್ತೋಲೆಯು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯದ ಆರ್ಡಿನೆನ್ಸ್ ನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಲಾಗುತ್ತಿದೆ. ಈ ಆರ್ಡಿನೆನ್ಸ್ 2012 ರಿಂದ ಜಾರಿಯಲ್ಲಿದೆ. ವಿಶ್ವವಿದ್ಯಾನಿಲಯವು ಯಾವುದೇ ಹೊಸ ನಿಯಮಗಳನ್ನು ಮಾಡಿಲ್ಲ; ಬದಲಿಗೆ, ಅಸ್ತಿತ್ವದಲ್ಲಿರುವ ಆರ್ಡಿನೆನ್ಸ್ ನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.
ಮೇಲೆ ತಿಳಿಸಲಾದ ಆರ್ಡಿನೆನ್ಸ್ ನ ನಿಬಂಧನೆಗೆ ಅನುಗುಣವಾಗಿ, ಜುಲೈ/ಆಗಸ್ಟ್ 2018 ರಲ್ಲಿ ಮತ್ತು ಅದಕ್ಕಿಂತಲೂ ಪೂರ್ವದಲ್ಲಿ ಪಿಎಚ್‍ಡಿ ಪ್ರವೇಶ ಪಡೆದ ಅಭ್ಯರ್ಥಿಗಳ ನೋಂದಣಿ ತಕ್ಷಣವೇ ಜಾರಿಗೆ ಬರುವಂತೆ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಇದೇನು ಹೊಸದಲ್ಲ ಈ ಹಿಂದೆಯೂ ವಿದ್ಯಾರ್ಥಿಗಳಿಗೆ ಇಂತಹ ಸುತ್ತೋಲೆಗಳನ್ನು ಹೊರಡಿಸಲಾಗಿದೆ.
ಮೇಲಿನ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾದ ಶೂನ್ಯ ಸೆಮಿಸ್ಟರ್‍ನ ಪರಿಗಣನೆಯು ಪ್ರಸ್ತುತ ಇನ್ನೂ ತಮ್ಮ ಪ್ರಬಂಧವನ್ನು ಸಲ್ಲಿಸದ ಹಾಗು ಐದು ವರ್ಷ ಪೂರೈಸಿದ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ದಿನಾಂಕ, 3ನೇ ಡಿಸೆಂಬರ್, 2020 ಮತ್ತು 1ನೇ ಡಿಸೆಂಬರ್, 2021 ರ ತನ್ನ ಸುತ್ತೋಲೆಯಲ್ಲಿ ಯುಜಿಸಿ ಆರು ತಿಂಗಳ ವಿಸ್ತರಣೆಯು 31ನೇ ಡಿಸೆಂಬರ್ 2020 ರಿಂದ 30ನೇ ಜೂನ್ 2021 ಮತ್ತು 31ನೇ ಡಿಸೆಂಬರ್, 2021 ರಿಂದ 30ನೇ ಜೂನ್, 2022 ರವರೆಗೆ ಆ ಸಂದರ್ಭದಲ್ಲಿ ತಮ್ಮ ಪ್ರಬಂಧ ಸಲ್ಲಿಸಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದಾಗ್ಯೂ, ಈ ಅವಧಿಯ ನಂತರ ವಿಸ್ತರಣೆಯನ್ನು ವಿಶ್ವವಿದ್ಯಾಲಯಗಳಿಗೆ ಅವರ ನಿಯಮಗಳನುಸಾರ ಆಯಾ ವಿಶ್ವವಿದ್ಯಾಲಯಕ್ಕೆ ಬಿಡಲಾಗಿದೆ. ಹೀಗಾಗಿ 2024ರ ಮಾರ್ಚ್ 22ರಂದು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ತಿಳಿಸಿದ್ದಾರೆ.