ಪಿಎಂ ಮೋದಿ ಸಭೆಗೆ ಕೂಡ್ಲಿಗಿಯಿಂದ 6ಸಾವಿರ ಅಧಿಕ ಕಾರ್ಯಕರ್ತರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.28 :-  ಇಂದು  ಸಂಜೆ 4 ಗಂಟೆಗೆ ಹೊಸಪೇಟೆಯ ಪುನೀತರಾಜಕುಮಾರ ಕ್ರೀಡಾಂಗಣದಲ್ಲಿ  ಜರುಗುವ  ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು  ಪರ ಮತಪ್ರಚಾರದಲ್ಲಿ   ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು ಈ ಮೋದಿ ಸಮಾವೇಶದಲ್ಲಿ  ಕೂಡ್ಲಿಗಿ ಕ್ಷೇತ್ರದಿಂದ ಅನೇಕ ವಾಹನಗಳಲ್ಲಿ ತೆರಳಿ  ಆರು ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಜನತೆ  ಭಾಗಿಯಾಗಿದ್ದಾರೆ ಎಂದು  ಕೂಡ್ಲಿಗಿ ಬಿಜೆಪಿ ಮಂಡಲ ಅಧ್ಯಕ್ಷ ಕಾಮಶೆಟ್ಟಿ ರಾಜು ತಿಳಿಸಿದರು.ಅವರು ಸಂಜೆವಾಣಿ ಪ್ರತಿನಿಧಿಯೊಂದಿಗೆ  ಮಾತನಾಡಿ ಹೊಸಪೇಟೆಗೆ ಇಂದು ಮೋದಿಯವರು ಬರುತ್ತಿರುವುದ್ದರಿಂದ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡಿದೆ. ಮೋದಿಯವರ ವಿಶ್ವನಾಯಕತ್ವ ವ್ಯಕ್ತಿತ್ವವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ, ಮೋದಿಯವರನ್ನು ಬಲಪಡಿಸಲು ಮತ್ತೆ ಮೋದಿ ಸರ್ಕಾರ ಕೇಂದ್ರದಲ್ಲಿ ಬರುವುದರಲ್ಲಿ ಎರಡು ಮಾತಿಲ್ಲ ಇದರಿಂದ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ನಾಂದಿ ಹಾಡಬೇಕಿದೆ ಎಂದರು.
ರಾಜ್ಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಗುಳಿಗಿ ವೀರೇಂದ್ರ ಮಾತನಾಡಿ, ಇಂದು  ಹೊಸಪೇಟೆಗೆ  ದೇಶದ ಪ್ರಧಾನಿಯೇ ಸಮಾವೇಶದಲ್ಲಿ ಭಾಗವಹಿಸುವುದರಿಂದ ಮೂರು ಜಿಲ್ಲೆಯಿಂದ ಲಕ್ಷಗಟ್ಟಲೇ ಜನರು  ಸೇರಿದ್ದಾರೆ ಇದರಿಂದ ಬಳ್ಳಾರಿ ಬಿಜೆಪಿ ಅಭ್ಯರ್ಥಿ   ಶ್ರೀರಾಮುಲು ಪರ ಮತ್ತಷ್ಟು ಪ್ರಬಲ ಅಲೆ ಸೃಷ್ಠಿಯಾಗುವುದರಲ್ಲಿ ಸಂದೇಹವಿಲ್ಲ, ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಪುನಃ  ಗೆದ್ದು ಭದ್ರಕೋಟೆ ಉಳಿಸಿಕೊಳ್ಳಲಿದೆ  ಈ ದೇಶಕ್ಕೆ ಮೋದಿಯವರ ನಾಯಕತ್ವ ಆಗತ್ಯತೆ ಇದ್ದು ಜನತೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ನೀಡುವುದರ ಮೂಲಕ  ಮೋದಿಯವರಿಗೆ ಮತ್ತೊಮ್ಮೆ ಬೆಂಬಲ  ನೀಡಲಿದ್ದಾರೆ ಎಂದರು.   
 ಬಿಜೆಪಿ ಹಿರಿಯ ಮುಖಂಡರಾದ ಗುಂಡುಮುಣಗು ಎಸ್.ಪಿ. ಪ್ರಕಾಶ್ ಮಾತನಾಡಿ ದೇಶದ ಆರ್ಥಿಕ ಪರಿಸ್ಥಿತಿ, ಮೋದಿಯ ಜನಪರ ಯೋಜನೆಗಳು, ಇಡೀ ವಿಶ್ವದ ಗಮನಸೆಳೆದಿದ್ದು ದೇಶವನ್ನು ಮುನ್ನಡೆಸುವ ಏಕೈಕ ಶಕ್ತಿ ಮೋದಿಯವರಿಗಿದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲಾ ಅಲ್ಲದೆ ಬಳ್ಳಾರಿಯಿಂದ ಶ್ರೀರಾಮುಲು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿಯ ಉದ್ಯಮಿ, ಬಿಜೆಪಿ ಯುವ ಮುಖಂಡ  ಗುಳಿಗಿ ಗುರುರಾಜ,  ತುಪ್ಪಾಕನಹಳ್ಳಿ ಭೀಮೇಶ್ ಮುಂತಾದವರು ಹಾಜರಿದ್ದರು.