ಪಿಎಂ ಅಭ್ಯರ್ಥಿ ಸಂಜೆ ಆಯ್ಕೆ

ಮುಂಬೈ,ಜೂ.೫- ದೇಶದಲ್ಲಿ ಸರ್ವಾಧಿಕಾರ ಕೊನೆಗಾಣಿಸಿ ಸಂವಿಧಾನ ಉಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಸಂಜೆ ಆಯ್ಕೆ ಮಾಡುತ್ತೇವೆ ಎಂದು ಶಿವಸೇನೆ ಉದ್ದವ್ ಠಾಕ್ರೆ ಬಣದ ಅಧ್ಯಕ್ಷ ಉದ್ದವ್ ಠಾಕ್ರೆ ತಿಳಿಸಿದ್ದಾರೆ.
ದೇಶಭಕ್ತರು ಮತ್ತು ಬಿಜೆಪಿಯಿಂದ ಕಿರುಕುಳಕ್ಕೊಳಗಾದ ಎಲ್ಲರೂ ಸಭೆ ಸೇರುತ್ತೇವೆ. ಚಂದ್ರಬಾಬು ನಾಯ್ಡು ಕೂಡ ಬಿಜೆಪಿ ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಹೇಳಿದದಾರೆ
ಇಂಡಿಯಾ ಮೈತ್ರಿ ಕೂಟ ಮಹಾರಾಷ್ಟ್ರದಲ್ಲಿ ಮತ್ತು ರಾಷ್ಟ್ರದಾದ್ಯಂತ ನಿಜವಾಗಿಯೂ ಉತ್ತಮವಾಗಿ ಕೆಲಸ ಮಾಡಿದೆ. ಭಾರತದಲ್ಲಿ ದುರಹಂಕಾರಕ್ಕೆ ಸ್ಥಾನವಿಲ್ಲ. ಸಂವಿಧಾನ ವಿರೋಧಿ ಶಕ್ತಿಗಳು, ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಬಣಕ್ಕೆ ಸೋಲಾಗಿದ್ದು ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಒಟ್ಟು ೪೮ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ೧೩, ಬಿಜೆಪಿ ೯, ಶಿವಸೇನೆ (ಉದ್ಧವ್ ಠಾಕ್ರೆ) ೯, ಎನ್‌ಸಿಪಿ( ಶರಾದ್ ಪವಾರ್) ೮, ಶಿಂಧೆ(ಶಿವಸೇನೆ) ೭ ಸ್ಥಾನವನ್ನು ಗೆದ್ದುಕೊಂಡಿದೆ.
೨೦೧೯ ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿ ೪೩ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ ಮೈತ್ರಿ ಕೇವಲ ೫ ಸ್ಥಾನ ಮಾತ್ರ ಗೆದ್ದುಕೊಂಡಿತ್ತು.