
ಆಳಂದ: ಎ.25:ಪಟ್ಟಣದ ಬಾಲಕರ ಜ್ಯೂನಿಯರ್ ಕಾಲೇಜಿನಲ್ಲಿ ತಾಲೂಕು ಚುನಾವಣೆ ಆಯೋಗವು ಹಮ್ಮಿಕೊಂಡ ಮತಟ್ಟೆಯ ಅಧ್ಯಕ್ಷ ಅಧಿಕಾರಿ (ಪಿಆರ್‍ಒ) ಮತ್ತು ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ (ಎಪಿಆರ್‍ಒ)ಗಳಿಗೆ ಒಂದು ದಿನದ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಬಿಹಾರ್ ಕೇಡರ್‍ನ ಮಿತಿಲೇಶ ಮಿಶ್ರಾ (ಐಎಎಸ್), ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ವೀಕ್ಷಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳು ನೀಡಿದರು.
ಕಾಲೇಜಿನಲ್ಲಿನ 11 ಕೋಠಡಿಗಳಲ್ಲಿ ಪ್ರತ್ಯೇಕವಾಗಿ ಆಯೋಜಿಸಿದ್ದ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದ ವೀಕ್ಷಕ ಮಿತಿಲೇಶ ಮಿಶ್ರಾ ಅವರು, ತರಬೇತಿ ಕಾರ್ಯವನ್ನು ವೀಕ್ಷಿಸಿದರು. ತರಬೇತಿದಾರರು ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಮತಯಂತ್ರ ವಿವಿಪ್ಯಾಡ್ ನಿರ್ವಹಣೆ ಕುರಿತು ಮತ್ತು ಪತ ಪತ್ರಗಳ ಪರಿಪೂರ್ಣವಾಗಿ ಅರಿತುಕೊಂಡರೆ ಮತದಾನ ವೇಳೆ ಸಲ್ಲಿಸಾಗಿ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ತರಬೇತಿ ಹೊಂದಿ ಚುನಾವಣೆ ಕಾರ್ಯ ಯಶಸ್ವಿಯಾಗಲು ಎಲ್ಲರೂ ಕೈ ಜೋಡಿಸಬೇಕು ಸಲಹೆ ನೀಡಿದರು.
ಕ್ಷೇತ್ರದ ಚುನಾವಣಾಧಿಕಾರಿ ಮಹಾಂತೇಶ ಮುಳಗೊಂಡ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಇತರರು ಈ ಸಂದರ್ಭದಲ್ಲಿ ಇದ್ದರು.
ಮಾಸ್ಟರ್ ತರಬೇತಿದಾರಾಗಿ ಹಾಜರಿದ್ದ ಮರೆಪ್ಪ ಬಡಿಗೇರ, ಸಂತೋಷ ವೇದಪಾಠಕ, ಶ್ರೀಶೈಲ ಮಾಳಗೆ, ಕಲ್ಯಾಣಪ್ಪ ಬಿಜ್ಜರಗಿ, ಭೀಮರಾವ್ ಅರಕೇರಿ, ಚಂದ್ರಕಾಂತ ಕಾಂಬಳೆ, ಗಜಾನಂದ ಕುಂಬಾರ, ಯೋಗಿರಾಜ ಮಾಡಿಯಾಳೆ, ವಿನೋಧ ಕುಲಕರ್ಣಿ, ಜಿತೇಂದ್ರ ಕೆ. ತಳವಾರ, ಗೌತಮ ಅವರು ಮತಯಂತ್ರ ನಿರ್ವಹಣೆ ಕುರಿತು ತರಬೇತಿ ನೀಡಿದರು. ಪಿಆರ್‍ಒ ಮತ್ತು ಎಪಿಎಆರ್‍ಒಗಳಾಗಿ ವಿವಿಧ ಇಲಾಖೆಯ ಸಿಬ್ಬಂದಿಗಳು ತರಬೇತಿಯಲ್ಲಿ ಹಾಜರಾಗಿ ತರಬೇತಿ ಪಡೆದುಕೊಂಡರು.