ಪಿಂಚಣಿ ಹಣ ನೀಡುವಂತೆ ಅಂಚೆ ಕಛೇರಿ ಮುಂದೆ ವಯೋವೃದ್ಧರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ಮೇ 28 :- ತಾಲೂಕಿನ ಎಲ್ಲೇಮಾಳ ಗ್ರಾಮದ ಅಂಚೆ ಕಚೇರಿ ಮುಂಭಾಗ ಸೋಮವಾರದಂದು
ವಯೋವೃದ್ದೆ , ವೃದ್ಧರು , ವಿಕಲಚೇತನ , ವಿಧಿವೆಯರು ಸೇರಿದಂತೆ ಮಹಿಳೆಯರು ಒಳಗೊಂಡ ಸುಮಾರು ಐವತ್ತಕ್ಕೂ ಹೆಚ್ಚು ಜನರು ಕೆಂಚಯ್ಯನ ದೊಡ್ಡಿ. ಚಿಕ್ಕತಾಪುರ ಬೂದುಗುಪ್ಪೆ ಇನ್ನಿತರ ಗ್ರಾಮಗಳಿಂದ ಜಮಾಯಿಸಿ ಪಿಂಚಣಿ ಹಣ ನೀಡುವಂತೆ ಒತ್ತಾಯಿಸಿರುವ ಘಟನೆ ಜರುಗಿತು.
ಪೆÇೀಸ್ಟ್ ಮಾಸ್ಟರ್ ಅವರು ವೃದ್ಯಾಪಿ ವೇತನ, ವಿದವ ವೇತನ, ಸಂದ್ಯಾ ಸುರಕ್ಷಾ ಹಾಗೂ ಇನ್ನಿತರ ಪಿಂಚಣಿ ಹಣವನ್ನು ಸಕಾಲಕ್ಕೆ ಕೊಡುತ್ತಿಲ್ಲ, ಒಂದು ತಿಂಗಳು ಹಣ ನೀಡುತ್ತಾರೆ, ಮತ್ತೊಂದು ತಿಂಗಳ ಹಣ ಬಂದಿಲ್ಲ ಎನ್ನುತ್ತಾರೆ ಸರ್ಕಾರದಿಂದ ಬಂದಿರುವಂತಹ ಹಣವನ್ನು ಸರಿಯಾಗಿ ಕೊಡುತ್ತಿಲ್ಲ.
ನಾವುಗಳೆಲ್ಲರೂ ತುಂಬಾ ಕಷ್ಟಲಿದ್ದೇವೆ ಅಕ್ಕಿ ಬೇಳೆ ಬೆಲ್ಲ ದಿನಬಳಕೆ ವಸ್ತುಗಳನ್ನು ತೆಗೆದುಕೊಳ್ಳೋಣ ಎಂದರೆ ಪಿಂಚಣಿ ಹಣವನ್ನು ಸಹ ಕೊಡುತ್ತಿಲ್ಲ ದಯಮಾಡಿ ನಮಗೆ ಪಿಂಚಣಿ ಹಣವನ್ನು ಕೊಡಿಸಿ ಕೊಡಬೇಕೆಂದು ವಯೋವೃದ್ಧರು ಮಾಧ್ಯಮ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಕಚೇರಿಗೆ ಸುಳಿದಿಲ್ಲ, ದೂರವಾಣಿ ಮೂಲಕ ಕರೆ ಮಾಡಿದರೆ ಇವತ್ತೂ, ನಾಳೆ ಬರುತ್ತೇನೆ ಎಂದೂ ಸಾಬೂಬು ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಗ್ರಾಮಕ್ಕೆ ಬರಲ್ಲ, ಮನೆಗಳಿಗೂ ಬಂದು ದುಡ್ಡು ಕೊಡಲ್ಲ, ಬಿಸಿಲು ಮಳೆ ಎನ್ನದೆ ಪಿಂಚಣಿ ಹಣಕ್ಕಾಗಿ ಮೂರು ನಾಲ್ಕು ಕಿಲೋ ಮೀಟರ ಕಾದು ಕುಳಿತು ಬಸವಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಲಳನ್ನು ತೋಡಿಕೊಂಡರು.
ನಮ್ಮಗಳಲ್ಲಿ ಕೆಲವರ ಪಾಸ್ ಬುಕ್ ಅವರೇ ಇಟ್ಟುಕೊಳ್ಳುತ್ತಾರೆ, ಹಣ ಹಾಗೂ ಬುಕ್ ಬಗ್ಗೆ ಕೇಳಿದರೆ ಉಢಾಪೆ ಉತ್ತರ ನೀಡುತ್ತಾರೆ ಸೌಜನ್ಯದಿಂದ ನೆಡೆದುಕೊಳ್ಳುವ ಬದಲು ಗದರುತ್ತಾರೆ ಎಂದರಲ್ಲದೆ ಪಿಂಚಣಿ ಹಣದಿಂದಲೇ ನಮ್ಮ ಜೀವನ ಸಾಗುತ್ತಿದೆ, ಕಣ್ಣು ಮಂಜು, ಕಾಲು ನೋವು ನೆಡೆಯಲು ಕಷ್ಟ ಆದರೂ ಪಿಂಚಣಿ ದುಡ್ಡಿಗೆ ಅಲೆಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಪಿಂಚಣಿ ಹಣ ಕೊಡಿಸುವಂತೆ ತಿಮ್ಮಮ್ಮ, ಮುನಿಯಮ್ಮ, ತಿರುಮಯ್ಯ, ಮಾದಮ್ಮ, ಕರದಮ್ಮ, ಅಂಕಮ್ಮ, ಮುತ್ತಮ್ಮ ಮತ್ತಿತರರು ಬೇಡಿಕೊಂಡರು. ಇದಕ್ಕೆ ಗ್ರಾಮದ ಕೆಲವು ಮುಖಂಡರು ಸಹ ದ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಎಲ್ಲೇಮಾಳ ಸೇರಿದಂತೆ ಚಿಗತಪುರ, ವೈ ಶಾಂಪಾಳ್ಯ, ಗಾಂಧಿನಗರ, ಕೊಡವೀರನಾಯಕನ ದೊಡ್ಡಿ, ಕೆಂಚಯ್ಯನ ದೊಡ್ಡಿಯ ಹಲವು ಪಿಂಚಣಿದಾರರು ಇದ್ದರು.