ಪಿಂಚಣಿ ಸಾಲ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ

ಸೈದಾಪುರ:ನ.13:ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕುಟುಂಬದ ನಿರ್ವಹಣೆಗೆ ಅಗತ್ಯ ಸಂದರ್ಭದಲ್ಲಿ ದೊರೆಯುವ ಸಾಲ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಎಸ್‍ಬಿಐ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ರಾಘವೇಂದ್ರರಾವ್ ಕೆ.ಜೆ ಅವರು ತಿಳಿಸಿದರು.

ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಲ್ಲಿ ಆಯೋಜಿಸಿದ್ದ ಪಿಂಚಣಿ ಸಾಲ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ವಿವಿಧ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಂತರದಲ್ಲಿ ಕುಟುಂಬದ ನಿರ್ವಹಣೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದ್ದಾಗ ನಮ್ಮ ಬ್ಯಾಂಕ್‍ಗೆ ಭೇಟಿ ನೀಡಿ. ಬೇರೆಯವರ ಹತ್ತಿರ ಬಡ್ಡಿ ದರದಲ್ಲಿ ಹಣವನ್ನು ಪಡೆದುಕೊಂಡು ಸಂಕಷ್ಟ ಅನುಭವಿಸುವುದಕ್ಕಿಂತ ನಿಮಗೆ ಬರುವ ಮಾಸಿಕ ಪಿಂಚಣಿಗೆ ಅನುಗುಣವಾದ ಅಗತ್ಯ ಸಾಲವನ್ನು ನೀಡಲಾಗುವುದು. ನಿಮ್ಮ ಕುಟುಂಬದವರ ಆರೋಗ್ಯ, ಶಿಕ್ಷಣ, ಗೃಹ ನಿರ್ಮಾಣ ಮಾಡಲು ಮುಂತಾದ ಅವಶ್ಯಕತೆಗಳನ್ನು ಪೂರೈಸಲು ನಿವೃತ್ತಿ ಹೊಂದಿದ ಪ್ರತಿಯೊಬ್ಬರು ನಮ್ಮ ಬ್ಯಾಂಕ್‍ನಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಸಂತೋಷದ ಜೀವನ ಸಾಗಿಸಿ ಎಂದರು.

ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ, ಪೊಲೀಸ್, ಶಿಕ್ಷಕ, ರೈಲ್ವೆ, ಅಂಚೆ ಕಚೇರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಲವು ಜನರಿದ್ದಾರೆ. ಅದರಲ್ಲಿ 50 ಕ್ಕಿಂತ ಅಧಿಕ ಜನರು ಈಗಾಗಲೇ ಈ ಪಿಂಚಣಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಅವಶ್ಯಕತೆ ಇದ್ದ ಪ್ರತಿಯೊಬ್ಬರು ಕೂಡ ಮುಂದಿನ ದಿನಗಳಲ್ಲಿ ನಿಮ್ಮ ಅಧಾರ ಕಾರ್ಡ, ಪಾನ್ ಕಾರ್ಡ ದಾಖಲೆಗಳೊಂದಿಗೆ ಬ್ಯಾಂಕ್‍ಗೆ ಆಗಮಿಸಿ ಸಾಲವನ್ನು ಪಡೆದುಕೊಳ್ಳಿ ಎಂದರು. ಸಿಬ್ಬಂದಿಗಳಾದ ಲಲಿತಾ ಕುಮಾರ, ಪ್ರಾಣೇಶ.ವಿ, ನಾಗರಾಜ.ವಿ, ಚಂದಪ್ಪ ಮುನಗಾಲ, ಶಿವರಾಯ.ಬಿ ಸೇರಿದಂತೆ ಇತರರಿದ್ದರು.