ಪಿಂಚಣಿ ಪಾವತಿಗಾಗಿ ಗ್ರಾಮಸ್ಥರ ಮನವಿ


ಜಗಳೂರು.ನ.೧೫; ತಾಲ್ಲೂಕಿನ  ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಸುಮಾರು 30-40 ಜನ ವಯೋವೃದ್ಧರ ಸಂಧ್ಯಾ ಸುರಕ್ಷಾ. ಮತ್ತು ವಿಧವೆ ವೇತನ 5-6 ತಿಂಗಳು ಕಳೆದರೂ ಪಿಂಚಣಿ  ಬಂದಿಲ್ಲವೆಂದು ಇಂದು ತಾಲೂಕು ಕಚೇರಿಯ ಮುಂಭಾಗ ಕಾದು ಕುಳಿತರು ಇದಕ್ಕೆ ಸಂಬಂಧಪಟ್ಟ ತಾಲೂಕು ಆಡಳಿತದ ಯಾವೊಬ್ಬ ಅಧಿಕಾರಿಯೂ ಐದಾರು ಗಂಟೆಗಳ ಆದರೂ  ಅವರ ಗೋಳನ್ನು ಕೇಳಲು ಮುಂದೆ ಬರಲೇ ಇಲ್ಲ ಸಂಬಳ ಬರದೇ ಇರುವುದು ಒಂದು ಕಡೆ ಇದ್ದರೆ ಇರಲಿ ಆದರೆ ವಯೋವೃದ್ಧರ ಮನವಿಯನ್ನು ಯಾವೊಬ್ಬ ಅಧಿಕಾರಿಯು ಕೂಡ ಸ್ವೀಕರಿಸಲಿಲ್ಲ ಇದೊಂದೇ ಗ್ರಾಮ ವಲ್ಲ ಜಗಳೂರು ತಾಲೂಕಿನ  ಎಲ್ಲಾ ಗ್ರಾಮಗಳಲ್ಲಿ ಇದೇ ರೀತಿಯಾಗಿರುವುದು ಒಂದು ದೊಡ್ಡ ಶೋಚನೀಯ ಸಂಗತಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ತಾಲೂಕು ಕಚೇರಿಯ ತಹಸಿಲ್ದಾರ್ ಮತ್ತು ಉಪತಹಶೀಲ್ದಾರ್ ಗಳನ್ನು ಕೇಳಿದರೆ ನಮ್ಮ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಿಂದ ಯಾವುದೇ ತೊಂದರೆಯಾಗಿಲ್ಲ ಅದು ಪೋಸ್ಟ್ ಆಫೀಸಿನ  ತಾಂತ್ರಿಕ ತೊಂದರೆಯಾಗಿರುವುದರಿಂದ ಪೋಸ್ಟ್ ಆಫೀಸ್ ಸಿಬ್ಬಂದಿಗಳನ್ನು ಕೇಳಬೇಕು ಎಂದು ತಿಳಿಸಿದರುಈ ಸಂದರ್ಭದಲ್ಲಿ ದಲಿತ ಸಂಘಟನೆಯ  ಮುಖಂಡರಾದ ಗೌರಿಪುರ ಸತ್ಯಮೂರ್ತಿ. ವಯೋವೃದ್ಧರು ಗಳಾದ  ನಾಗೇಂದ್ರಪ್ಪ. ವೆಂಕಟೇಶಪ್ಪ. ಹನುಮಕ್ಕ. ಕೊಲ್ಲಮ್ಮ. ಸಂಜೀವಮ್ಮ. ಜಯಮ್ಮ. ಈರಮ್ಮ. ವನಜಾಕ್ಷಮ್ಮ. ಈರಮ್ಮ. ಪ್ರೇಮಕ್ಕ. ಜಯಲಕ್ಷ್ಮಿ. ಕಾಟಮ್ಮ. ದುರ್ಗಮ್ಮ. ಸುಶೀಲಮ್ಮ ನಾಗಪ್ಪ. ಗಿಡ್ಡಪ್ಪ. ರಾಮಪ್ಪ ಚಿಕ್ಕಮ್ಮ. ಗಂಗಮ್ಮ ರಾಜಪ್ಪ. ರಾಜಪ್ಪ ದುರ್ಗಪ್ಪ. ಜಯಮ್ಮ ಸೇರಿದಂತೆ  ಗ್ರಾಮದ ಗ್ರಾಮಸ್ಥರು ಸಾರ್ವಜನಿಕರು ಭಾಗವಹಿಸಿದ್ದರು  

Attachments area