
ಕಲಬುರಗಿ.ಫೆ.22: ಪಿಂಚಣಿದಾರರ ಸಮಸ್ಯೆಗಳನ್ನು ಮುಕ್ತವಾಗಿ ಬಗೆಹರಿಸಲಾಗುವುದು ಎಂದು ರಾಜ್ಯ ಪಿಂಚಣೆ ಪಾವತಿ ಮತ್ತು ನಿರ್ವಹಣೆ ಹೆಚ್ಚುವರಿ ನಿರ್ದೇಶಕಿ ಭಾಗ್ಯಲಕ್ಷ್ಮೀ ಅವರು ಹೇಳಿದರು.
ಬುಧವಾರದಂದು ಜಿಲ್ಲಾಡಳಿತ ಕಚೇರಿಯ ವೀಡಿಯೋ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ ಅಪರ ನಿರ್ದೇಶಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ವಿಭಾಗದ ಪಿಂಚಣಿ ಅದಾಲತ್‍ನ್ನು ಸಸಿ ನೀರು ಉಣ್ಣಿಸುವುರದ ಮೂಲಕ ಉದ್ಫಾಟಿಸಿ ಮಾತನಾಡಿದರು.
2023 ರಂದು 5 ಲಕ್ಷ ಪಿಂಚಣಿದಾರರು ಪಿಂಚಣಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಕುಂದುಕೊರತೆಗಳನ್ನು ಬಗೆಹರಿಸುವುದಕ್ಕಾಗಿ ಆಯಾ ಜಿಲ್ಲೆಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಅಂಚೆ ಪೇದೆಯವರನ್ನು ನೇಮಕ ಮಾಡಲಾಗುವುದು, ಪಿಂಚಣಿ ಕಾಲ್ ಸೆಂಟರ್ ಆರಂಭ ಮಾಡಲಾಗುತ್ತದೆ. ಕಾಲ್ ಮುಖಾಂತರ ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಿಂಚಣೆ ಪೋರ್ಟಲ್ ಪ್ರಾರಂಭ ಮಾಡಲಾಗಿದ್ದು, ಅದರಲ್ಲಿ ಪಿಂಚಣಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಜಿಲ್ಲಾಡಗಳಾದ ಯಾದಗಿರಿ, ಬೀದರ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಈ ಜಿಲ್ಲೆಗಳಾದ ವಾಸವಿರುವ ಪಿಂಚಣಿದಾರರು ಆಯಾ ಜಿಲ್ಲಾಡಳಿತದ ಕಛೇರಿಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಅವರ ಕುಂದುಕೊರತೆ ಮತ್ತು ಅಹವಾಲುಗಳನ್ನು ನಿವಾರಿಸಿಕೊಡರು. ಕಲಬುರ್ಗಿ ಜಿಲ್ಲೆಯ ಪಿಂಚಣಿದಾರರು ಈ ಅದಾಲತ್‍ದಲ್ಲಿ ನೇರವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಎ.ಎ.ಓ. ಮಹಾಲೇಖಪಾಲ ಭಾರತಿ ಸತ್ಯನಾರಾಯಣ, ಡಿಎಜಿ ಮಹಾಲೇಖಪಾಲ ಪ್ರಿನ್ಸನ್ ವರ್ಗೀಸ್, ಎ.ಎ.ಓ. ಮಹಾಲೇಖಪಾಲ ಶ್ರೀಕಾಂತ ಎಂ.ಎ., ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕ ಅಶೋಕ್.ವಿ. ಕಲ್ಯಾಣ, ಬೆಂಗಳೂರಿನ ಎಎಓ ಮಹಾಲೇಖಪಾಲ ಎನ್.ಜಿ. ಗಾಯತ್ರಿ ಸೇರಿದಂತೆ ಕರ್ನಾಟಕದ ಎಲ್ಲಾ ಅಧಿಕಾರಿಗಳು, ಜಿಲ್ಲಾ ಖಜಾನಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು, ಎಲ್ಲಾ ಇಲಾಖೆಗಳ ಪಿಂಚಣಿ ಶಾಖೆಯನ್ನು ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.