ಪಿಂಚಣಿಗೆ ಆಗ್ರಹ

ಗುಳೇದಗುಡ್ಡ, ಸೆ.22-ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪೊಲೀಸರಿಂದ ಬಂಧನಕೊಳ್ಳಗಾಗಿ ಜೈಲು ಸೇರಿದ್ದ ಹೋರಾಟಗಾರರಿಗೆ ಮಾಸಿಕ ಪಿಂಚಣಿ ನೀಡುವಂತೆ ಲೋಕತಂತ್ರ ಸೇನಾನಿಯ ಗುಳೇದಗುಡ್ಡ ಹಾಗೂ ಕೆರೂರ ಘಟಕದ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲೋಕತಂತ್ರ ಸೇನಾನಿಯ ಮುಖಂಡರಾದ ಶಂಕರ ಕಾಟವಾ, ರಂಗಪ್ಪ ಶೇಬಿನಕಟ್ಟಿ ಅವರು ಜಂಟಿಯಾಗಿ ಮಾತನಾಡಿ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದನ್ನು ಅಂದು ರಾಜ್ಯಾದ್ಯಂತ ವಿರೋಧಿಸಲಾಗಿತ್ತು. ಆ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿದವನ್ನು ಪೋಲೀಸರು ಬಂಧಿಸಿದ್ದರಲ್ಲದೇ ಅವರನ್ನು ಜೈಲಿನಲ್ಲಿ ಸಹ ಇಟ್ಟಿದ್ದರು. ಈ ತುರ್ತು ಪರಿಸ್ಥಿತಿ ವಿರೋಧಿಸಿದವರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಸಿಕ ಪಿಂಚಣಿ ನೀಡುತ್ತವೆ ಎಂದಿದ್ದರು. ಅದರಂತೆ ಈ ಸೌಲಭ್ಯ ಗುಜರಾತ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ಮಾಸಿಕ ಅವರು 20ರಿಂದ25ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದಾರೆ. ಇದೇ ಮಾದರಿಯಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಸಹ ಜಾರಿ ಮಾಡಬೇಕು. ತುರ್ತು ಪರಿಸ್ಥಿತಿಯ ಅಂದಿನ ಸಂದರ್ಭದಲ್ಲಿ ಪಟ್ಟಣದ ಅನೇಕ ಜನರು ಮೃತಪಟ್ಟಿದ್ದಾರೆ. ಈಗ ಉಳಿದ ಹೋರಾಟಗಾರರಿಗೆ ಸರ್ಕಾರ ಕೂಡಲೇ ಪಿಂಚಣಿ ಸೌಲಭ್ಯ ನೀಡಬೇಕೆಂದು ಶಂಕರ ಕಾಟವಾ, ರಂಗಪ್ಪ ಶೇಬಿನಕಟ್ಟಿ ಸರ್ಕಾರಕ್ಕೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕತಂತ್ರ ಸೇನಾನಿ ಸಮಿತಿ ಸದಸ್ಯರಾದ ದೇವೆಂದ್ರಪ್ಪ ಗಾಯದ, ಹೂವಪ್ಪ ಗೌಡ್ರ, ಈರಪ್ಪ ನಿಲುಗಲ್ಲ, ನಾರಾಯಣಪ್ಪ ಉಣಚಗಿ, ಬಸವರಾಜ ಬ್ಯಾಳಿ, ಈರಪ್ಪ ಸುರಪುರ, ಮಹಾಗುಂಡಪ್ಪ ಅರಕಾಲಚಿಟ್ಟಿ, ನಂದಪ್ಪ ಉಣಚಗಿ, ಬಸಟ್ಟೆಪ್ಪ ಮುರನಾಳ, ಪುಂಡಲೀಕ ಧುತ್ತರಗಿ, ವಿರುಪಾಕ್ಷಿ ವಾಳದುಂಕಿ ಮತ್ತಿತರರಿದ್ದರು.