ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆ

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆಯು ವಿಟ್ಲ ಸಿಪಿಸಿಆರ್‌ಐ ಬಳಿಯ ಮಂಗಳಾ ಮಂಟಪದಲ್ಲಿ ಕಂಪೆನಿಯ ಅಧ್ಯಕ್ಷ ರಾಮಕಿಶೋರ ಕೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಎಸ್ ವರದಿ ವಾಚಿಸಿದರು. ನಿರ್ಧೇಶಕರುಗಳಾದ ಸದಾನಂದ ಗೌಡ, ಪದ್ಮನಾಭ ಶೆಟ್ಟಿ, ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಶ್ವನಾಥ ಎಂ, ಕೊರಗಪ್ಪ ನಾಯ್ಕ, ಬಾಲಚಂದ್ರ ಕೆ, ಪುಷ್ಪಾ ಎಸ್ ಕಾಮತ್, ಜಯರಾಮ ರೈ, ಭಾಸ್ಕರ ಎಂ, ಕೃಷ್ಣಮೂರ್ತಿ ಕೆ ವೇದಿಕೆಯಲ್ಲಿದ್ದರು. ಹೇಮಲತಾ ಉಕ್ಕುಡ ಪ್ರಾರ್ಥಿಸಿದರು. ನಿರ್ಧೇಶಕ ರಾಜಾರಾಮ ಭಟ್ ಸಿ ಜಿ ಸ್ವಾಗತಿಸಿದರು. ರಮೇಶ ಎನ್ ವಂದಿಸಿದರು. ಜನಾರ್ಧನ ಪದ್ಮಶಾಲಿ ನಿರೂಪಿಸಿದರು.