ಪಿಂಕ್ ಸೀರೆಯಲ್ಲಿ ದಿವ್ಯಾ ಮಿಂಚಿಂಗ್

ಬೆಂಗಳೂರು, ಮಾ. ೧೪- ಸ್ಯಾಂಡಲ್ ವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಹೊಸ ಪೋಟೋ ಶೇರ್ ಮಾಡಿದ್ದು, ನೆಟ್ಟಿಗರು ನಟಿಯ ಅಂದಕ್ಕೆ ಫಿದಾ ಆಗಿದ್ದಾರೆ.
ದಿವ್ಯಾ ಉರುಡುಗ ಪಿಂಕ್ ಸೀರೆಯಲ್ಲಿ ತಮ್ಮ ಪ್ರೀತಿಯ ಪೆಟ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೇ ಇದಕ್ಕೆ. ಕಳೆದು ಹೋದ ಮತ್ತು ಕಂಡುಬಂದ ನೀಲಿಯನ್ನು ನೆನಪಿಸಿಕೊಳ್ಳಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ದಿವ್ಯಾ ಉರುಡುಗ ಅವರು ಪ್ಲೇನ್, ಚಿಕ್ಕ ಬಾರ್ಡರ್ ಇರುವ ಪಿಂಕ್ ಸೀರೆಯನ್ನು ಉಟ್ಟಿದ್ದಾರೆ. ಅದಕ್ಕೆ ಗ್ರೀನ್ ಕಲರ್ ಸ್ಲೀವ್ ಲೆಸ್ ಬ್ಲಾಸ್ ಹಾಕಿ ಸಖತ್ ಗೆ ಕಾಣಿಸಿಕೊಂಡಿದ್ದಾರೆ.
ಅಲ್ಲದೇ ದಿವ್ಯಾ ಉರುಡುಗ ಸೀರೆಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿಕೊಂಡು, ಮಲ್ಲಿಗೆ ಹೂವು ಮುಡಿದಿದ್ದಾರೆ. ಸೀರೆಗೆ ಮ್ಯಾಚ್ ಆಗುವಂತೆ ಸರ ಹಾಕಿಕೊಂಡಿದ್ದಾರೆ. ಕಿವಿಯಲ್ಲಿ ಚಿಕ್ಕ ಓಲೆ ಧರಿಸಿದ್ದಾರೆ.
ದಿವ್ಯಾ ಉರುಡುಗ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅರವಿಂದ್ ಮತ್ತು ದಿವ್ಯಾ ಅರ್ಧಂಬರ್ಧ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ ೦೮ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಕ್ಲೋಸ್ ಆಗಿದ್ದರು. ಇಬ್ಬರ ನಡುವೆ ಪ್ರೀತಿ ಇದ್ದು, ಮದುವೆ ಆಗಲಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.