ಪಾ.ಮಲ್ಲೇಶ ಹೇಳಿಕೆ ಖಂಡಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ, ನ.18-ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ಮಠಗಳ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಆಪ್ತಕಾರ್ಯದರ್ಶಿಯಾದ ಪಾ. ಮಲ್ಲೇಶ ಬಹಿರಂಗ ಕ್ಷಮೆಗೆ ಆಗ್ರಹಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ) ವಿಜಯಪುರ ಘಟಕ ಆಗ್ರಹಿಸಿತು.

ನವೆಂಬರ 15 ರಂದು ಮೈಸೂರಲ್ಲಿ ನಡೆದ “ಸಿದ್ರಾಮಯ್ಯ 75” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾ.ಮಲ್ಲೇಶ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ಮಠಗಳು ಮೀಸಲಾತಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿವೆ, ದೇಶ ಹಾಳಾಗಿದ್ದು ಬ್ರಾಹ್ಮಣ್ಯ- ಬಾಹ್ಮಣರು ಮತ್ತು ವೇದ ಉಪನಿಷತ್‍ಗಳಿಂದ ಅವುಗಳನ್ನು ನಂಬಬೇಡಿ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರೋಧಿಸಿ, ಪಾ.ಮಲ್ಲೇಶ ಬಹಿರಂಗ ಕ್ಷಮೆ ಕೇಳುವಂತೆ ನಿನ್ನೆ ಜಿಲ್ಲಾಧ್ಯಕ್ಷರಾದ ಮುಕುಂದ ಕುಲಕರ್ಣಿ ನೇತೃದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ) ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತಾಡಿದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನಗರ ಅಧ್ಯಕ್ಷರಾದ ಪ್ರಶಾಂತ ದೇಶಪಾಂಡೆ “ವಸುದೇವ ಕುಟುಂಬಕಮ್ ಎನ್ನುವ ಹಾಗೆ ಬ್ರಾಹ್ಮಣ ಸಮಾಜ ಯಾರೊಂದಿಗೂ ತಂಟೆ-ತಕರಾರಿಗೆ ಹೋಗದೇ ತಮ್ಮ ಪಾಡಿಗೆ ತಾವು ಇರುವ ಸೌಮ್ಯರು. ಇಂತಹ ಸೌಮ್ಯವಾದಿಗಳಾದ ಬ್ರಾಹ್ಮಣರ ವಿರುದ್ದ ಹಾಗೂ ವೇದ- ಉಪನಿಷತ್ತ ಕುರಿತು ಪಾ.ಮಲ್ಲೇಶ ವಿವಾದಾಕ್ಮ ಹೇಳಿಕೆ ನೀಡಿರುವುದು ಖಂಡನೀಯವಾದುದ್ದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆಯೇ ಬ್ರಾಹ್ಮಣರ ವಿರುದ್ದ ಪಾ.ಮಲ್ಲೇಶ ಮಾತಾಡಿದರೂ ಅದನ್ನು ತಡೆಯದಿದ್ದದ್ದು ಅವರ ಬ್ರಾಹ್ಮಣ ಜಾತಿ ವಿರೋಧಿಯನ್ನ ತೋರಿಸುತ್ತದ” ಎಂದು ಹೇಳಿದರು.

“ಪಾ. ಮಲ್ಲೇಶರ ಬ್ರಾಹ್ಮಣ ವಿರುದ್ದ ವಿವಾದಾತ್ಮಕ ಹೇಳಿಕೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತೆದೆ” ಎಂದು ‘ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ ಕುಲಕರ್ಣಿ ಹೇಳಿದರು. ನಂತರ ಮಾತಾಡಿದ ಜಿಲ್ಲಾಧ್ಯಕ್ಷರಾದ ಮುಕುಂದ ಕುಲಕರ್ಣಿ “ಬ್ರಾಹ್ಮಣ ಸಮಾಜ ನೀರಿನಂತೆ ಸಮಾದ ಎಲ್ಲರೊಂದಿಗೆ ಬೇರತು ಒಂದಾಗಿರುವ ಸಮಾಜವಾಗಿದೆ, ಆದರೂ ಈ ಸಮಾಜದ ವಿರುದ್ಧ ವಿವಾದಾತ್ಮಕ ಕೇಳಿಕೆಗಳು ಕೇಳಿರುತ್ತಿರುವುದು ಖಂಡಿನೀಯ” ಎಂದರು.

ಬಿಡಿಎ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ ಶಂಕರ ಕುಲಕರ್ಣಿ, ಶ್ರೀರಂಗ ಪುರಾಣಿಕ, ಕೃಷ್ಣ ಕುಲಕರ್ಣಿ, ವೆಂಕಟೇಶ ಗುಡಿ, ವಾರೀಶ ಕುಲಕರ್ಣಿ, ಆನಂದ ಕುಲಕರ್ಣಿ, ಅರವಿಂದ ಜೋಶಿ, ಗೋವಿಂದ ದೇಶಪಾಂಡೆ, ವಾದಿರಾಜ ರಘುವೀರ, ವಿಶ್ವನಾಥ ಕುಲಕರ್ಣಿ, ಜ್ಞಾನೇಶ್ವರ ಕುಲಕರ್ಣಿ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಚಿನ ಪಡ್ನೀಸ್, ರಮೇಶ ಕುಲಕರ್ಣಿ, ಮೀತಾ ದೇಸಾಯಿ, ಲಕ್ಷ್ಮೀ ಕುಲಕರ್ಣಿ, ವೀನಾಕ್ಷಿ ಸಾವಳಗಿ, ಅನಿತಾ ಪದಕಿ ಬ್ರಾಹ್ಮಣ ಸಮಾಜದ ಇನ್ನು ಅನೇಕರು ಉಪಸ್ಥಿತರಿದ್ದರು.