ಪಾಸ್ ನೀಡುವಂತೆ ವೃತ್ತಿನಿಂತ ಛಾಯಾ ಗ್ರಾಹಕರ ಮನವಿ


ಬ್ಯಾಡಗಿ,ಎ.25:ಕೊರೋನಾ ಹಿನ್ನಲೆಯಲ್ಲಿ ನೈಟ್ ಹಾಗೂ ವೀಕೆಂಡ್ ಕಫ್ರ್ಯೂ ಜಾರಿಯಾಗಿರುವ ಕಾರಣ ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಫೆÇೀಟೋ ಮತ್ತು ವಿಡಿಯೋ ತೆಗೆಯಲು ತಾಲೂಕಾಡಳಿದ ವತಿಯಿಂದ ಪಾಸ್ ನೀಡುವಂತೆ ವೃತ್ತಿನಿರತ ಛಾಯಾಗ್ರಾಹಕರ ತಾಲೂಕಾ ಘಟಕದ ಸದಸ್ಯರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ಶಿವಾನಂದ ಕಾಸಂಬಿ ಏಪ್ರಿಲ್, ಮೇ, ತಿಂಗಳಲ್ಲಿ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳು ಹೆಚ್ಚಾಗಿರುವ ಕಾರಣ ನಮ್ಮಗಳ ಹೊಟ್ಟೆ ತುಂಬಿಸಿಕೊಳ್ಳಲು ಈ ಮೂರು ತಿಂಗಳುಗಳು ಅತ್ಯಂತ ಮಹತ್ವದ್ದಾಗಿವೆ. ಕಳೆದ ವರ್ಷವು ಸಹ ಇದೇ ತಿಂಗಳುಗಳಲ್ಲಿ ಲಾಕ್‍ಡೌನ್ ಮಾಡಿದ್ದ ಕಾರಣ ನಮ್ಮಗಳ ಬದುಕು ಬೀದಿಗೆ ಬಿದ್ದಿತ್ತು.
ಇದೀಗ ಸರಕಾರ ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಹಾಗೂ ವಿಕೇಂಡ್ ಕಫ್ರ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ನಮಗೆ ಮದುವೆಗಳಿಗೆ ತೆರಳಲು ಅಧಿಕಾರಿಗಳು ತಾಕೀತು ಮಾಡುತ್ತಿರುವ ಕಾರಣ ತಾಲೂಕಾಡಳಿತದ ವತಿಯಿಂದ ಪಾಸ್ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ರವಿಕುಮಾರ ಕೊರವರ, ನಿಮ್ಮಗಳ ಸಮಸ್ಯೆ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಿರಣ ಕುಂಟೋಜಿ, ಸುರೇಶ ಸಂಕಣ್ಣವರ, ವಿನ್ಸೆಂಟ್ ಫೆರೀರಾ, ಶಶಿಧರ ಕಲ್ಲಾಪೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.