ಪಾಸಿಟಿವ್ ಪ್ರಕರಣಗಳ ಮನೆ ಸೀಲ್‍ಡೌನ್

ಕೆ.ಆರ್.ಪೇಟೆ:ಏ:04: ಪಟ್ಟಣದ ಜಯನಗರ ಬಡಾವಣೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು ಬಡಾವಣೆಯಲ್ಲಿನ ಪಾಸಿಟಿವ್ ಪ್ರಕರಣಗಳ ಮನೆಗಳನ್ನು ಪುರಸಭಾ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಸೀಲ್‍ಡೌನ್ ಮಾಡ ಲಾಯಿತು.
ಜಯನಗರ ಬಡಾವಣೆಯಲ್ಲಿ 12 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಮನೆಗಳಿಗೆ ತೆರಳಿ ಕುಟುಂಬದ ಇತರೆ ಸದಸ್ಯರುಗಳಿಗೆ ಅವಶ್ಯಕವಾದ ಮಾತ್ರೆಗಳು ಔಷóಧಿಗಳನ್ನು ವಿತರಿಸಿ ಮಾತನಾಡಿದರು.
ಕಳೆದ ಹದಿನೈದು ದಿನಗಳಿಂದ ಬಡಾವಣೆಯಲ್ಲಿ 4-5 ಸಾವುಗಳು ಹಾಗೂ 20 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮುಂಜಾಗ್ರತಾ ದೃಷ್ಟಿಯಿಂದ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಸೀಲ್‍ಡೌನ್ ಮಾಡ ಲಾಗಿರುವ ಮನೆಗಳಿಗೆ ಬೇಕಾದ ತರಕಾರಿ, ಹಾಲು, ಮೊಸರು, ಮುಂತಾದ ಅಗತ್ಯ ವಸ್ತುಗಳು ಬೇಕೆನಿಸಿದಾಗ ಅವರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಕೆಲಸ ಮಾಡಬೇಕು ಎಂದು ಪುರಸಭಾ ಸಿಬ್ಬಂಧಿಗಳಿಗೆ ಸೂಚಿಸಿದರು.
ಬಡಾವಣೆಯ ನಿವಾಸಿಗಳು ಕೊರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಅವಶ್ಯಕತೆ ಇದ್ದಾಗ ಮಾತ್ರ ಮನೆಯ ಹೊರಗೆ ಬನ್ನಿ ಇಲ್ಲವಾದಲ್ಲಿ ಮನೆಯಲ್ಲಿಯೇ ಇರಿ. ಆ ಮೂಲಕ ಸೋಂಕನ್ನು ನಿಯಂತ್ರಿಸಬಹುದು. ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು. ಮುಂದಿನ ಒಂದು ತಿಂಗಳ ವರೆಗೂ ಬಹಳ ಎಚ್ಚರದಿಂದ ಇರಬೇಕು ಇಲ್ಲವಾದಲ್ಲಿ ಮಹಾಮಾರಿಗೆ ಬಲಿಯಾ ಗಬೇಕಾಗುತ್ತದೆ, ಎಂದು ತಿಳಿಸಿದರು.
ಪುರಸಭಾ ಸಿಬ್ಬಂಧಿಗಳಾದ ರಾಜಸ್ವ ನಿರೀಕ್ಷಕ ರವಿ, ಆರೋಗ್ಯಾಧಿಕಾರಿ ಅಶೋಕ್, ರೆವಿನ್ಯೂಅಧಿಕಾರಿ ರಾಜೇಶ್, ಭಾರತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೆಮಂಜು, ಪುಟ್ಟಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.