
ಯಾದಗಿರಿ:ಜ.4: ದೇಶದಾದ್ಯಂತ ಸಾರ್ವಜನಿಕರು ಹೊಸ ವರ್ಷವನ್ನು ಕೇಕ್ ಕತ್ತರಿಸುವ ಬದಲು ರೈತ ಬೆಳೆದ ಕಲ್ಲಂಗಡಿ ಹಣ್ಣು ಕತ್ತರಿಸುವ ಮೂಲಕ 2023ರ ಹೊಸ ವರ್ಷ ಸ್ವಾಗತಿಸಬೇಕು. ಇದರಿಂದ ಯಾವ ಕೆಟ್ಟ ಪರಿಣಾಮ ಆಗದೆ ಒಳ್ಳೆಯ ಬೆಳವಣಿಗೆ ಉಂಟಾಗುತ್ತದೆ. ಭಾರತೀಯ ಆಹಾರ ಪದ್ದತಿಯಿಂದ ಆರೋಗ್ಯ ಭಾಗ್ಯ ಲಭಿಸಲಿದ್ದು, ಪಾಶ್ಚಾತ್ಯರ ಪದ್ದತಿಗಳ ಅಂಧಾನುಕರಣೆಯಿಂದ ಕೈಬಿಟ್ಟು ಸ್ವಂತಿಕೆ ದೇಶಿ ಪದ್ಧತಿಗಳನ್ನು ಅನುಸರಿಸುವಂತೆ ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ ಹೇಳಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹಳೆ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯಕ್ಕೆ ಹಸಿರಿನ ತೋರಣದಿಂದ ಸಿಂಗಾರ ಮಾಡಿ ಬಣ್ಣಬಣ್ಣದ ಲೈಟ್ ಗನ್ನು ಅಳವಡಿಸಿ ವಿನೂತನ ಮತ್ತು ವಿಭಿನವಾಗಿ ಡಿ.31 ರಂದು ಮದ್ಯರಾತ್ರಿ ಹೊಸ ವರ್ಷಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಾಗಲೇ ಹೊಸವರ್ಷ ಬಂದರೆ ಮದ್ಯ ಮಾಂಸಗಳ ಸೇವನೆ ಮಾಡಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ತಮ್ಮ ತನವನ್ನೆ ಮರೆತು ಮನ ಬಂದಂತೆ ನರ್ತಿಸಿ, ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸಿ ರೇವ್ ಪಾರ್ಟಿ ಮಾಡಿ ಶಿಷ್ಟಚಾರವೇ ಇಲ್ಲದಂತೆ ಆಚರಿಸುವುದು ಇದು ಉತ್ತಮ ಬೆಳವಣಿಗೆಯಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ಪದ್ದತಿಗೆ ಮನಸೋತು ನಮ್ಮ ಸಂಸ್ಕೃತಿಯನ್ನೆ ಮರೆತು ಮನಬಂದಂತೆ ವರ್ತಿಸುವುದು ದೇಶಕ್ಕೆ ಶೋಭೆ ತರುವಂತಹದ್ದಲ್ಲ ಮದ್ಯಪಾನ ಯಚ್ಚೇಥವಾಗಿ ಮಾಡಿ ಮಧ್ಯರಾತ್ರಿಯಲ್ಲಿ ಮನಬಂದಂತೆ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಸಾವಿಗೀಡಾಗವುದು ಸಾಮಾನ್ಯವಾಗಿದೆ. ಅನುಚಿತ ವರ್ತನೆಯಿಂದ ಆಗುವ ಅನಾಹುತದಿಂದ ಸಂಭ್ರಮದ ಬದಲಿಗೆ ಮನೆಯ ಕುಟುಂಬದ ಸದಸ್ಯರು ಕಣ್ಣೀರಿಡುವಂತಾಗುತ್ತದೆ. ಪ್ರತಿ ವರ್ಷ ಹೊಸ ವರ್ಷದ ದಿನದಂದು ಒಂದು ದಿನಕ್ಕೆ ರಾತ್ರಿ ನೂರಾರು ಕೋಟಿ ರೂಪಾಯಿ ಮಧ್ಯ ಮಾರಾಟವಾಗುತ್ತದೆ. ಇದರಿಂದ ಸಣ್ಣ ವಯಸ್ಸಿನ ಮಕ್ಕಳು ಹೊಸ ವರ್ಷದ ನೆಪದಲ್ಲಿ ಮದ್ಯ ಸೇವನೆ ಮಾಡಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಆದರೆ ರೈತ ಬೆಳೆದ ದಿನಸಿ ಹಣ್ಣು ಹಂಪಲುಗಳನ್ನು ಸೇವನೆ ಮಾಡಿದ್ದರೆ ತಾನು ಬೆಳೆದ ಬೆಳೆ ಮಾರಾಟವಾಗಿ ಲಾಭವನ್ನು ಪಡೆದುಕೊಂಡು ರೈತನಿಗೂ ಕೂಡ ಹೊಸ ವರ್ಷದ ಸಂತೋಷ ಮೂಡಿಬರುತ್ತದೆ.
ಎಂದು ಹೇಳಿದರು.
ನಮ್ಮ ದೇಶದ ಪದ್ದತಿ ಯುಗಾದಿಯಿಂದ ಯುಗಾದಿಗೆ ಒಂದು ವರ್ಷ ಬೇವು- ಬೆಲ್ಲ ಕುಡಿದು ಆಚರಣೆ ಯಾರಿಗೂ ತೊಂದರೆ ಕೊಡದೆ ಸಂಭ್ರಮದಿಂದ ಎಲ್ಲರೂ ಸೌಹಾರ್ದದಿಂದ ಬಾಳಿ ಬದುಕುವ ಎಂಬುದು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗ ಬಿಟ್ಟು ಇಂತಹ ಕೃತಕ ಆಚರಣೆಯಿಂದ ಸಮಾಜಕ್ಕೆ ಬಹಳ ತೊಂದರೆ ಎಲ್ಲರ ಅಶಾಂತಿಗೆ ಕಾರಣವಾಗುವುದು ದುರದಷ್ಟಕರ ಹಾಗಾಗದಂತೆ ನಾವು ಎಚ್ಚರವಹಿಸಿ ಹಣ್ಣು-ಹಂಪಲು ನೆಲ ಕಬ್ಬು ತರಕಾರಿ ಕಡಲೆ ಇವೆಲ್ಲ ಹೊಸವರ್ಷಕ್ಕೆ ಅನುಗುಣವಾಗಿ ರೈತ ಬೆಳೆಯುತ್ತಾನೆ. ನಾವು ಇವೆಲ್ಲವನ್ನು ಸೇವಿಸಿ ಆಚರಣೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ರೈತನಿಗೆ ಬೆಂಬಲ ಕೊಟ್ಟಂತಾಗುತ್ತದೆ. ಕೊರೊನಾ ಮತ್ತು ಅತಿವೃಷ್ಟಿಯಿಂದ ಕಂಗಾಲಾಗಿರುವ ರೈತನು ಕೂಡ ತಾನು ಬೆಳೆದ ಬೆಳೆಗೆ ಬೆಲೆ ಸಿಕ್ಕ ಖುಷಿಯಿಂದ ಬಾಳುತ್ತಾನೆ ಎಂದರು.
ಇದೇ ಸಂದರ್ಭದಲ್ಲಿ ಸುನಂದಾ, ಹರ್ಷಿತಾ, ಅರ್ಪಿತಾ, ಪವನ ಮುದ್ನಳ, ವಿಶಾಲ ಮುದ್ನಾಳ, ಜಗದೀಶ್, ಸಣ್ಣ ಹಣಮಂತ ಮಡ್ಡಿ, ತಾಯಪ್ಪ ಯಾದಗಿರಿ, ಚಂದ್ರಶೇಖರ, ಯಲ್ಲಾಲಿಂಗ, ರಾಮಕೃಷ್ಣ, ಮಹಾದೇವಪ್ಪ, ಮೈಲಾರಲಿಂಗ, ಭಾಗಪ್ಪ, ಕುಮ್ಮದ, ಬ್ರಿಂದಾ, ನಂದಿನಿ, ಪ್ರೀತಮ್, ರವಿ, ಶಿವು ಅನಿಲ, ಲಕ್ಕಿ, ಮನ್ವಿತ್, ಅಮೂಲ್ಯ, ಭುವನ, ಪ್ರಜ್ವಲ್, ಸೇರಿದಂತೆ ಅನೇಕರು ಉಪಸ್ಥಿತರದಿದ್ದರು.
ನಮ್ಮ ಭಾರತದ ಪರಂಪರೆ ಬಿಂಬಿಸುವಂತೆ ಬಾಳೆಹಣ್ಣು, ಸೇಬು, ಸಪೋಟ, ಮೋಸಂಬಿ, ಸಂತೂರ, ಕಲ್ಲಂಗಡಿ, ಕರಬೂಜ, ಹಂಗೂರ, ಹಸಿ ಕಡ್ಲೆಕಾಯಿ, ಸೀತಿನಿ ಹಾಗೂ ಕಚ್ಚಾ ತರಕಾರಿಗಳಾದ ಸೌತೆಕಾಯಿ, ಗೆಜರಿ, ಟಮೋಟಾ, ಮೂಲಂಗಿ, ಮೆಂತೆಸೊಪ್ಪು,ಅವರೆಕಾಯಿ, ಸಬಸಿ, ಜಂಬಲಹಣ್ಣು, ಅಂಗೂರ, ಪಪ್ಪಾಯಿ, ಖಜೂರು, ಬಾದಾಮಿ, ಪೈನಾಪಲ್, ಪೇರು, ಸಿತ್ತಪಲ್, ದಾಂಳಬಿ, ನಿಂಬೆಹಣ್ಣು, ಕರಿ ದ್ರಾಕ್ಷಿ, ಕರಿಬೇವು, ಪುಂಡಿಪಲ್ಲ, ಶೇಂಗಾ, ಚಿಕ್ಕು, ಬೀಳಿಜೋಳ ಮತ್ತು ನೆಲಕಬ್ಬು ಪೈರು ಕೊತಂಬರಿ ಸೊಪ್ಪು, ಪಟಾಣಿ , ದಾಳೆಂಬರಿ, ಎಳನೀರು, ಸೇಂಗಾ, ಬಾರಿಹಣ್ಣು ಈ ಎಲ್ಲಾ ಪೌಷ್ಟಿಕ ಆಹಾರ ತಿಂದು ಸುಖಶಾಂತಿ ನೆಮ್ಮದಿಯಿಂದ ಹರ್ಷಪಟ್ಟು ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸುವುದು ಬಹಳ ಒಳ್ಳೆಯದು. ಇದನ್ನು ಎಲ್ಲರೂ ಅನುಸರಿಸುವಂತೆ ಮನವಿ ಮಾಡುತ್ತೇನೆ.
ಉಮೇಶ್ ಮುದ್ನಾಳ,
ಸಾಮಾಜಿಕ ಕಾರ್ಯಕರ್ತ, ಯಾದಗಿರಿ