ಪಾವನಪುರ ಗ್ರಾಮಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಹರಿಬಾಬು ಭೇಟಿ, ಮತಗಟ್ಟೆ ಪರಿಶೀಲನೆ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.೧೭; ಪ್ರತಿಯೊಬ್ಬರು ಮತದಾನವನ್ನು ತಪ್ಪದೆ ಮಾಡಬೇಕು, ಮತದಾನ ಮಾಡಲು ಯಾರಾದರೂ ಅಡ್ಡಿ ಉಂಟು ಮಾಡಿದರೆ ಅಂತವರ ಬಗ್ಗೆ ಮಾಹಿತಿ ತಿಳಿಸಿ ಎಂದು ವಿಜಯನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿಬಾಬು ಗ್ರಾಮಸ್ಥರಿಗೆ ಕೋರಿದರು.ಅತೀ ಸೂಕ್ಷ್ಮ ಮತಗಟ್ಟೆಯಾದ ತಾಲೂಕಿನ ಪಾವನಪುರ ಗ್ರಾಮಕ್ಕೆ ಪೊಲೀಸ್ ವರಿಷ್ಟಾಧಿಕಾರಿಗಳು ಭೇಟಿ ನೀಡಿ, ಮತಗಟ್ಟೆ ಕೇಂದ್ರವನ್ನು ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ ನಮಗೆ ತಿಳಿಸಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ, ನಿಮಗೆ ಯಾರ ಮೇಲಾದರೂ ಭಯವಿದ್ದರೆ ನಮಗೆ ಗುಪ್ತವಾಗಿ ತಿಳಿಸಿ, ದಾರಿ ತಪ್ಪುವಂತಹ ಯುವಕರಿಗೆ ಊರಿನ ಹಿರಿಯರು, ಬುದ್ಧಿ ಹೇಳಿ ಸರಿ ದಾರಿಗೆ ತರಬೇಕೆಂದು ಗ್ರಾಮಸ್ಥರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಅರಸೀಕೆರೆ ಪಿಎಸ್‌ಐ ಕೆ.ರಂಗಯ್ಯ, ಕೂಲಹಳ್ಳಿ ಎಂ.ಕೊಟ್ರೇಶ್, ಪ್ರಸಾದ ಕವಾಡಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಇದ್ದರು.