ಪಾಲು ಕೇಳಿದವನ ಪತ್ನಿಯನ್ನೇ ಟ್ರ್ಯಾಕ್ಟರ್ ಹಾಯಿಸಿ ಕೊಲೆ

ತಾಳಿಕೋಟೆ:ಅ.17: ಹೊಲದಲ್ಲಿ ಬೆಳೆದ ಪಾಲು ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲು ಕೊಡುವಂತೆ ಕೇಳಿದ ತನ್ನ ಪತ್ನಿ ಚಾಂದಬಿ ಬಳಗಾನೂರ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ತಾಳಿಕೋಟಿ ಪೆÇಲೀಸ್ ಠಾಣೆಯಲ್ಲಿ ಕೂಚಬಾಳ ಗ್ರಾಮದ ರೈತ ಲಾಳೇಮಶ್ಯಾಕ ಬಳಗಾನೂರ ದೂರು ದಾಖಲಿಸಿದ್ದಾರೆ.
ಘಟನೆ ವಿವರ : ಕೂಚಬಾಳದ ಬಸವಂತ್ರಾಯ ಪಾಟೀಲ್ ಇವರ 32 ಎಕರೆ ಜಮೀನಿನಲ್ಲಿ ಗ್ರಾಮದ ಲಾಳೇಮಶ್ಯಾಕ ಬಳಗಾನೂರ ಹಾಗೂ ಸುರೇಶ ಕರನಾಳ ಕೂಡಿಕೊಂಡು ನಾಲ್ಕು ವರ್ಷಗಳಿಂದ ಪಾಲಿಗೆ ಮಾಡಿಕೊಂಡು ಬರುತ್ತಿದ್ದರು. ಹೊಲದಲ್ಲಿ ಬೆಳೆದಿದ್ದ ಮಾಲಿನಲ್ಲಿ ಎರಡು ಪಾಲು ಮಾಡಿ ಅದರಲ್ಲಿ ಹೊಲದ ಮಾಲೀಕರಿಗೆ ಒಂದು ಇನ್ನುಳಿದ ಪಾಲಿನಲ್ಲಿ ಇಬ್ಬರು ಹಂಚಿಕೆ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಕಳೆದ ಎರಡು ವರ್ಷಗಳಿಂದ ಹೊಲದಲ್ಲಿ ಬೆಳೆದಿದ್ದ ಬೆಳೆಯಲ್ಲಿ ತನ್ನ ಪಾಲಿನ ಹಣ ಕೊಡುವಂತೆ ಸುರೇಶ ಕರನಾಳಗೆ ಲಾಳೇಮಶ್ಯಾಕ ಬಳಗಾನೂರ ಕೇಳುತ್ತ ಬಂದಿದ್ದ.ಇದರಿಂದ ಕುಪಿತನಾಗಿದ್ದ ಸುರೇಶ ಅ.11 ರಂದು ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಲಾಳೇಮಶ್ಯಾಕ ಎಂದಿನಂತೆ ತನ್ನ ಎರಡು ವರ್ಷಗಳ ಹಿಂದಿನ ಪಾಲಿನ ಹಣ ಹಾಗೂ ಈ ವರ್ಷದ್ದು ಸೇರಿ ಕೊಡುವಂತೆ ಕೇಳಿಕೊಂಡಿದ್ದಾನೆ.ಇದರಿಂದ ಸಿಟ್ಟಾದ ಸುರೇಶ, ಹೋದಲ್ಲಿ ಬಂದಲ್ಲಿ ನನ್ನನ್ನು ಪಾಲು ಕೊಡುವಂತೆ ಕೇಳುತ್ತಾ ಮರ್ಯಾದೆ ಹಾಳು ಮಾಡುತ್ತಿದ್ದೀಯಾ ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತ್ನಿ ಚಾಂದಬಿ ಬಳಗಾನೂರ ಹಿಂದಿನಿಂದ ಗುದ್ದಿಸಿ ಆಕೆಯ ಹೊಟ್ಟೆಯ ಮೇಲೆ ಟ್ರ್ಯಾಕ್ಟ್ಟರ್ ಹಾಯಿಸಿ ಗಂಭೀರವಾಗಿ ಗಾಯಪಡಿಸಿದ್ದಾನೆ. ನನ್ನ ಮೇಲೂ ಟ್ರ್ಯಾಕ್ಟರ್ ಹಾಯಿಸಲು ಬಂದಾಗ ತಪ್ಪಿಸಿಕೊಂಡು ಬಂದು ಕೆನಾಲ್ ಹತ್ತಿರ ನಿಂತುಕೊಂಡು ಊರಿನವರಿಗೆ ಫೆÇೀನ್ ಮಾಡಿ ನಮ್ಮನ್ನು ಸಾಯಿಸುತ್ತಾನೆ ಎಂದು ಕರೆ ಮಾಡಿದಾಗ ಅಲ್ಲಿಂದ ಟ್ರ್ಯಾಕ್ಟರ್ ಅಲ್ಲೆ ಬಿಟ್ಟು ಜೀವದ ಬೆದರಿಕೆ ಹಾಕಿ ತಪ್ಪಿಸಿಕೊಂಡನು. ನಂತರ ತನ್ನ ಸಂಬಂಧಿಕರಾದ ಬುರಾನಸಾಬ ಮುಲ್ಲಾ, ಮೈಬೂಬ ಕುಳಗೇರಿ ಅವರದೊಂದಿಗೆ ಸ್ಥಳಕ್ಕೆ ಹೋಗಿ ನನ್ನ ಪತ್ನಿ ಚಾಂದಬಿಯನ್ನು ನೋಡಲಾಗಿ ಆಕೆ ತೀವ್ರ ಗಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದಳು. ಈ ಘಟನೆಗೆ ಕಾರಣರಾದ ಸುರೇಶ ಕರನಾಳ, ಈರಣ್ಣ ಕರನಾಳ, ಚನ್ನಬಸಪ್ಪ ಕರನಾಳ ಅವರು ನನ್ನ ಪತ್ನಿಯ ಸಾವಿಗೆ ನೇರ ಕಾರಣರಾಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಾಳಿಕೋಟಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸುರೇಶ ಕರನಾಳನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಇನ್ನಿಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪಿಎಸ್‍ಐ ರಾಮನಗೌಡ ಸಂಕನಾಳ ತಿಳಿಸಿದ್ದಾರೆ.