ಪಾಲಿಟೆಕ್ನಿಕ್ ಕಾಲೆಜಿನಲ್ಲಿ ಸಸಿ ನೆಟ್ಟರು


(ಸಂಜೆವಾಣಿ ವಾರ್ತೆ)
ಬಳ್ಳಾರಿ.ಜೂ.18: ಇಲ್ಲಿನ ನಿಮಗಾಗಿ ನಾವು ಸಂಸ್ಥೆಯ ಕಾರ್ಯಕರ್ತರಿಂದ  ಇಂದು  ನಮ್ಮ ಪರಿಸರ ಯೋಜನೆಯಡಿ  ಸಸಿ ನೆಡುವ ಕಾರ್ಯ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ  ಇಂದು ಬೆಳಿಗ್ಗೆ ನಡೆಯಿತು. 35  ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.
ಸಂಸ್ಥೆಯ ಕಾರ್ಯದರ್ಶಿ  ಅಜಿತ್ ಈ ಸಂದರ್ಭದಲ್ಲಿ ಮಾತಾಡಿ,  ನಮ್ಮ ಪರಿಸರ ಯೋಜನೆಯು ಈ ಮಳೆಗಾಲ ಮುಗಿಯುವವರೆಗೆ ಇರಲಿದ್ದು, ಉಚಿತವಾಗಿ ಸಸಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಮೆಹಬೂಬ್ ಭಾಷ ಮಾತಾಡಿ ಸಸಿಗಳನ್ನು ನೆಟ್ಟು ಬೆಳೆಸುವುದು ನಮ್ಮ ಜವಾಬ್ದಾರಿಯುತ ಕೆಲಸವಾಗಬೇಕೆಂದರು.
ಕಾಲೇಜಿನ ಹಳೇ ವಿದ್ಯಾರ್ಥಿ ಹರೀಶ್ ರೆಡ್ಡಿ ಮಾತಾಡಿ ನಮ್ಮ ಕಾಲೇಜನ್ನು ಹಸಿರಾಗಿ ಮಾಡುವ ಜವಾಬ್ದಾರಿ ಹೊತ್ತ ನಿಮಗಾಗಿ ನಾವು ಸಂಸ್ಥೆಯ ಕೆಲಸ ನಮಗೆ ಮಾದರಿ ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕರಾದ  ಅನುಪಮ, ಶಮೀನ್ ಭಾನು ಸಂಸ್ಥೆಯ ಸಾನ್ವಿ ಆಯಾನ್ ವಿನಯ್,ಅಜಿತ್,ಭಾಷ,ಸುದರ್ಶನ್, ಸಾಗರ್,ಸಂದೀಪ್,ವೀರೇಶ್,ಸಂಜೀವ್,ನಾಗರಾಜ್,ಹೇಮಂತ್,ಬಾಲು, ಅನಿಲ್,ಸಾಗರ್ ದಕ್ಷಿಣ ಮೂರ್ತಿ,ಶಿವರಾಜ್, ಅವಿನಾಶ್ ಮೊದಲಾದವರು  ಪಾಲ್ಗೊಂಡಿದ್ದರು.

One attachment • Scanned by Gmail