ಪಾಲಿಕ್ಲಿನಿಕ್‌ಗಳಿಗೆ ಲೋಕಾಯುಕ್ತ ಎಸ್.ಪಿ ಉಮೇಶ್ ಭೇಟಿ

ಕೋಲಾರ, ಆ.೧- ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ಪಾಲಿಕ್ಲಿನಿಕ್‌ಗಳಿಗೆ ಲೋಕಾಯುಕ್ತ ಎಸ್.ಪಿ ಉಮೇಶ್ ಅವರು ಭೇಟಿ ನೀಡಿ ಅಧಿಕಾರಿಗಳನ್ನು ವಿಚಾರಣೆ ಒಳಪಡೆಸಿ ದಾಖಲೆಗಳನ್ನು ಪರಿಶೀಲಿಸಿ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು,
ಸಾರ್ವಜನಿಕರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಅಸ್ಪತ್ರೆಗಳಲ್ಲಿ ವೈದ್ಯರ ಮತ್ತು ಔಷಧಿಗಳ ಕೊರತೆಗೆ ಸಂಬಂಧಿಸಿ ದೂರುಗಳು ಬಂದ ಹಿನ್ನಲೆಯಲ್ಲಿ ಸೋಮವಾರ ಲೋಕಾಯುಕ್ತ ಎಸ್.ಪಿ. ಅವರು ಭೇಟಿ ನೀಡಿದಾಗ ಸಂಬಂಧ ಪಟ್ಟ ಉಪ ನಿರ್ದೇಶಕರು ಕಚೇರಿಯಲ್ಲಿ ಇರಲಿಲ್ಲ. ಪಾಲಿ ಕ್ಲಿನಿಕ್‌ನಲ್ಲಿ ವೈದ್ಯರು ಇರಲಿಲ್ಲ. ಸಿಬ್ಬಂದಿಗಳನ್ನು ಪ್ರಶ್ನೆಸಿದಾಗ ಉಪನಿದೇರ್ಶಕರು ಮುಳಬಾಗಿಲು, ತಾಯಲೂರಿಗೆ ಹೋಗಿದ್ದಾರೆ. ವೈದ್ಯರ ಹುದ್ದೆ ಇನ್ನು ಯಾರು ನೇಮಕಾತಿಗೊಂಡಿಲ್ಲ ಎಂದು ಉತ್ತರಗಳು ಬಂದಿತು.
ನಂತರ ತಾಲ್ಲೂಕು ಅಧಿಕಾರಿ ಡಾ.ಸುಬಾನ್ ಪಾಷ ಅವರನ್ನು ಭೇಟಿ ಮಾಡಿ ಒಟ್ಟು ಇಲಾಖೆಯಲ್ಲಿ ನೇಮಕಾತಿಯ ಮಂಜೂರಾತಿ ಮತ್ತು ಖಾಲಿ ಇರುವ ಮಾಹಿತಿಗಳನ್ನು ಪಡೆದರು,ಗುತ್ತಿಗೆ ಹಾಗೂ ಹೊರ ಗುತ್ತಿಗೆ ಅಧಾರದ ಮೇಲೆ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಾಹಿಸುತ್ತಿರುವ ಕುರಿತು ಮಾಹಿತಿ ಪಡೆದು ಹಾಜರಾತಿಯ ಪುಸ್ತಕವನ್ನು ಪರಿಶೀಲಿಸಿದರು,
ಇದೇ ಸಂದರ್ಭದಲ್ಲಿ ಇಲಾಖೆಗೆ ಸರ್ಕಾರದಿಂದ ಪೂರೈಕೆಯಾಗಿರುವ ಔಷಧಿಗಳು, ಲಸಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು, ಪಾಲಿ ಕ್ಲಿನಿಕ್‌ಗೆ ಭೇಟಿ ನೀಡಿ ಅಲ್ಲಿನ ವೈದ್ಯರಾದ ಡಾ.ಪಾಷ ಮತ್ತು ಸಹಾಯಕ ಕಾಂತರಾಜ್ ಹಾಗೂ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು, ಅವರ ಕೆಲಸದ ಅವಧಿ, ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದ ಜಾನುವಾರುಗಳು ಅವುಗಳಲ್ಲಿ ಹೆಚ್ಚಾಗಿ ಕಂಡು ಬರುವಂತ ಕಾಯಿಲೆಗಳು, ಅವುಗಳಿಗೆ ನೀಡಿರುವ ಚಿಕಿತ್ಸೆ ಔಷಧಿ.ಲಸಿಕೆಗಳ ಬಗ್ಗೆ ಸಂಪೂರ್ಣ ವಿವರ ಪಡೆದರು,
ನಂತರ ದಾಸ್ತನು ಕೊಠಡಿಗಳಲ್ಲಿ ಔಷಧಿಗಳು ಮತ್ತು ಲಸಿಕೆ ಹಾಗೂ ಇತರೆ ಪರಿಕರಗಳ ದಾಸ್ತನು ಪರಿಶೀಲನೆ ನಡೆಸಿದರು,
ಮಧ್ಯಾಹ್ನ ೧,೩೦ ವೇಳೆಗೆ ಉಪನಿರ್ದೇಶಕರಾದ ಡಾ.ಕೆ.ಟಿ.ರಾಮಯ್ಯ ಅವರು ಕಚೇರಿಗೆ ಬಂದ ನಂತರ ಇಲಾಖೆಗೆ ಸಂಬಂಧಿದಂತೆ ಜಿಲ್ಲಾ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದರು,
ಜಿಲ್ಲೆಯಲ್ಲಿ ೧೦೫ ಆಸ್ಪತ್ರೆಗಳಿವೆ, ೫ ಮೊಬೈಲ್ ವಾಹನ, ೧೦೮ ವೈದ್ಯರ ಪೈಕಿ ೭೯ ಹುದ್ದೆಗಳು ಭರ್ತಿಯಾಗಿದ್ದು ೩೧ ಹುದ್ದೆಗಳು ಖಾಲಿ ಇವೆ, ಸರ್ಕಾರದಿಂದ ಬರುವ ಸೌಲಭ್ಯಗಳ ವಿತರಣೆಗೆ ಸಮಿತಿಯೊಂದು ಇದ್ದು ಅದಕ್ಕೆ ಶಾಸಕರೇ ಅಧ್ಯಕ್ಷರು ಹಾಗೂ ಸದಸ್ಯರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳು ಇರುತ್ತಾರೆ ಅವರ ಶಿಫಾರಸ್ಸು ಮಾಡಿದ ಹಾಗೂ ಇಲಾಖೆಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು,
ಅಂಬ್ಯೂಲೆನ್ಸ್‌ಗಳು ಬರಬೇಕಾಗಿದ್ದು ಅವರುಗಳಿಗೆ ಸಂಬಂಧ ಪಟ್ಟಂತೆ ಚಾಲಕರು ಮತ್ತು ಹೆಚ್ಚವರಿ ವೈದ್ಯರ ನೇಮಕಾತಿಗಾಗಿ ಟೆಂಡರ್ ಕರೆಯಲಾಗಿದೆ. ಉಳಿದಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತವನೆಯನ್ನು ಸಲ್ಲಿಸಿದ್ದು, ಸರ್ಕಾರದ ಅದೇಶದಂತೆ ಗುತ್ತಿಗೆ ಅಧಾರದ ಮೇರೆ ನೇಮಕಾತಿಗೆ ಆಹ್ವಾನ ಪ್ರಕಟಿಸಿದ್ದರು ಸರ್ಕಾರದ ವೇತನ ಕಡಿಮೆ ಇರುವ ಕಾರಣಕ್ಕೆ ಯಾರು ಬರಲಿಲ್ಲ ಹಾಗಾಗಿ ಹುದ್ದೆಗಳು ಖಾಲಿ ಇದೆ ಎಂದರು,