ಪಾಲಿಕೆ ಸಭೆ: ಅಧಿಕಾರಿಗಳ ಕಾರ್ಯ ನಿರ್ವಹಣೆ -ಸದಸ್ಯರ ಅಸಮಾಧಾನ

ಹುಬ್ಬಳ್ಳಿ,ಜು.29: ಮೇಯರ್ ವಿರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಇಂದು ಜರುಗಿದ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳ ಕಾರ್ಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಚರ್ಚೆ ನಡೆಯಿತು.
ಪಾಲಿಕೆ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಇ-ಸ್ವತ್ತು ಸೇರಿದಂತೆ ಹಲವು ವಿಷಯಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರಿಯಾದ ಕಾರ್ಯನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು ಯಾವ ರೀತಿಯಾಗಿ ಪಾಲಿಕೆಯ ಆದಾಯವನ್ನು ಹೆಚ್ಚಿಸಬೇಕು ಎಂದು ಅವರು ತಮ್ಮ ನಿಲುವನ್ನು ತಿಳಿಸಿದರು.
ಮತೋರ್ವ ಸದಸ್ಯ ನಿರಂಜನ ಹಿರೇಮಠ ಮಾತನಾಡಿ, ಹು-ಧಾ ಅಭಿವೃದ್ಧಿಗೆ ಸಂಬಂದಿಸಿದಂತೆ ಹಣ ಕೊರತೆಯಿದ್ದು, ಪೌರಕಾರ್ಮಿಕರ ವೇತನ ಸರಿಯಾಗಿ ಆಗಿತ್ತಿಲ್ಲ. ಅಲ್ಲದೇ ಅನೇಕ ಜನರಿಗೆ ವೇತನ ಇಲ್ಲದೇ ಪರದಾಡುವಂತಾಗಿದೆ ಎಂದು ಹೇಳಿದರು.
ಪಾಲಿಕೆಯಲ್ಲಿ ವಿಶೇಷವಾದ ಬಜೆಟ್ ಮಂಡನೆ ಮಾಡಬೇಕು ಎಂದ ಅವರು, ಹು-ಧಾ ಮಹಾನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದು ಈ ಕುರಿತು ಸದಸ್ಯರ ಹೇಳಿಕೆಗಳನ್ನು ಮಹಾಪೌರರು ಆಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ, ಉಪ ಮೇಯರ್ ಉಮಾ ಮುಕಂದ, ವಿರೋಧ ಪಕ್ಷದ ನಾಯಕ ದೊರಾಜ ಮನ್ನೆಕುಂಟ್ಲಾ, ಪಾಲಿಕೆ ರಾಜಣ್ಣ ಕೊರವಿ, ಚೇತನ್ ಹಿರೇಕೆರೂರ, ಸರ್ವ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.