ಪಾಲಿಕೆ ಸಭೆಯಲ್ಲಿ ಸದಸ್ಯರ ಬದಲಾಗಿ ಸಂಬಂಧಿಗಳ ಆಟಾಟೋಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.12: ಹಲವು ವಾರ್ಡುಗಳಲ್ಲಿ  ಆಯ್ಕೆಯಾಗಿರುವ ಮಹಿಳಾ ಸದಸ್ಯರು ನಮಕಾವಸ್ತೆ. ಏನಿದ್ದರೂ ಅವರ ಪತಿ, ತಂದೆ,  ಇನ್ನಿತರೇ ಸಂಬಂಧಿಗಳು ಸಭೆ ಸಮಾರಂಭಗಳಲ್ಲಿ ಭಾಗವಹಿದುವುದಲ್ಲದೆ. ಅಧಿಕಾರವನ್ನು ಚಲಾಯಿಸುತ್ತಾರೆ ಎಂಬುದಕ್ಕೆ ಇಂದು ಕೋಟೆ ಪ್ರದೇಶದ ವಾಟರ್ ಬೂಸ್ಟರ್ ಬಳಿ ನಡೆದ ಸಭೆ ಸಾಕ್ಷಿಯಾಗಿದೆ.
ಪಾಲಿಕೆಯ 3 ನೇ ವಲಯದ ಕುಂದು ಕೊರತೆಗಳ ಬಗ್ಗೆ ಮೇಯರ್  ತ್ರಿವೇಣಿ ಮತ್ತು ವಲಯದ ಪಾಲಿಕೆ ಸದಸ್ಯರು ಉಪಸ್ಥಿತರಿದ್ದು ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯ ನಡೆಯಿತು.
ಇಲ್ಲಿ ಪಾಲಿಕೆ ಸದಸ್ಯರು ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಉಪ ಮೇಯರ್ ಜಾನಕಿ, ಸದಸ್ಯರುಗಳಾದ ವಿ.ಕುಬೇರ, ಆಶಿಫ್ ಇದ್ದರು.
ಇನ್ನುಳಿದಂತೆ ಸದಸ್ಯರಾದ ಡಿ.ಶುಕುಂ ಬದಲಿಗೆ ಸಂಬಂಧಿ ಅಯಾಜ್, ತಂದೆ ಅಲ್ಲಾ ಭಕಾಷ್, ಮಂಜುಳಾ ಅವರ ಬದಲಿಗೆ ಪತಿ‌ ಉಮಾಪತಿ, ಶ್ವೇತ ಅವರ ಬದಲಿಗೆ ಪತಿ ಸೋಮು ಮತ್ತು ಶಿಲ್ಪ ಅವರ ಬದಲಿಗೆ ನಾಗಲಕೆರೆ ಗೋವಿಂದ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರೇ ಮೇಯರ್ ಮತ್ತು ಉಪ‌ ಮೇಯರ್ ಆಗಿರುವಾಗಲೂ, ಮಹಿಳಾ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಮಹಿಳಾ ಮೀಸಲಾತಿಗೇನು ಅರ್ಥ.
ಇನ್ನೂ ಪುರುಷ ಪೌರುಷತ್ವದಲ್ಲೇ ಮಹಿಳೆಯರನ್ನು ಹೊರ ಬರದಂತೆ ಮಾಡಿ ಆಡಳಿತಕ್ಕೆ ಅಧಿಕಾರಿಗಳು ಅವಕಾಶ ನೀಡುವುದಾದರೂ ಸರಿಯೇ.
ಕನಿಷ್ಟ
ಸಭೆಗೆ ಸದಸ್ಯರನ್ನು ಕರೆತರದೇ, ಸಂಬಂಧಿತ ಪುರುಷರೇ ಸಭೆಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಅವರೇ ಆಲೋಚಿಸಬೇಕಿದೆ.