ಪಾಲಿಕೆ ಸಭಾನಾಯಕರಾಗಿ ಗಾದೆಪ್ಪ ಮುಂದುವರಿಕೆ
 ಸ್ಥಾಯಿ ಸಮಿತಿಗೆ ಆಶಿಫ್, ಶಿಲ್ಪ, ವಿಕ್ಕಿ, ಗುಡಿಗಂಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.30: ಪಾಲಿಕೆಯ ನೂತನ‌ ಮೇಯರ್ ಮತ್ತು ಉಪ‌ಮೇಯರ್ ಆಯ್ಕೆ ಚುನಾವಣೆ ನಂತರ ಪಾಲಿಕೆಯ ಆವರಣದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಸೈಯದ ನಾಸಿರ್ ಹುಸೇನ್ ಅವರು ಪಕ್ಷದಲ್ಲಿ ಹಿರಿಯರಾಗಿರುವ ಪಿ.ಗಾದೆಪ್ಪ ಅವರನ್ನು ಈ ಬಾರಿಯೂ ಪಾಲಿಕೆಯ ಸಭಾ ನಾಯಕರನ್ನಾಗಿ ಮುಂದುವರಿಯಲಿದ್ದಾರೆಂದು ಪ್ರಕಟಿಸಿದರು.
ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ  ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ 30 ನೇ ವಾರ್ಡಿನ ಸದಸ್ಯ ಆಸಿಫ್ ಭಾಷಾ, 26 ನೇ ವಾರ್ಡಿನ ಸದಸ್ಯೆ ಶಿಲ್ಪ ಅವರನ್ನು ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ  20 ನೇ ವಾರ್ಡಿನ ಸದಸ್ಯ ಪೇರಂ ವಿವೇಕ್ (ವಿಕ್ಕಿ) ಅವರನ್ನು ಆಯ್ಕೆ ಮಾಡಲಾಗಿದೆ. ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದು 1 ವಾರ್ಡಿನ  ಸದಸ್ಯ ಗುಡಿಗಂಟಿ ಹನುಮಂತ ಇದರ ಅಧ್ಯಕ್ಷರಾಗಿದ್ದಾರೆ.