ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಜನ್ಮದಿನಾಚರಣೆ

ದಾವಣಗೆರೆ.ಮೇ.೧೯; ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ, ದಾವಣಗೆರೆ ಜಿಲ್ಲಾ ಘಟಕದ  ವತಿಯಿಂದ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ದಾವಣಗೆರೆ ಜಿಲ್ಲಾ ವಾಲ್ಮೀಕಿ ಯುವ ಘಟಕದ ಅಧ್ಯಕ್ಷರಾದ  ವಿನಾಯಕ ಪೈಲ್ವಾನ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ   ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ  ಬಿ. ಶ್ರೀನಿವಾಸ  ನಾಯಕ, ರಾಜ್ಯ ಉಪಾಧ್ಯಕ್ಷರಾದ  ಕೆ. ನಾಗರಾಜ್, ದಾವಣಗೆರೆ  ಮಹಾನಗರ ಪಾಲಿಕೆ ಸದಸ್ಯರಾದ  ಎ. ನಾಗರಾಜ,  ಜೆ. ಎನ್.  ಶ್ರೀನಿವಾಸ್,  ಹುಲ್ಲುಮನೆ ಗಣೇಶ್,  ಸಂಘದ ಎಸ್ ಕೆ  ಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ  ಅಣ್ಣಪ್ಪ, ಎಂ. ಮಂಜುನಾಥ್, ನಾಗರಾಜ್ ಹಾಗೂ ನಾಯಕ ವಿದ್ಯಾರ್ಥಿನಿಲಯದ ನಿರ್ದೇಶಕರಾದ  ಕೆ.ಆರ್. ಮಂಜುನಾಥ್  ಇವರು ಉಪಸ್ಥಿತರಿದ್ದರು. ನಂತರ  ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.