ಪಾಲಿಕೆ ಸದಸ್ಯ ಮಂಜುನಾಥ್ ಮೇಲೆ ವೃಥಾ ಆರೋಪಕ್ಕೆ ಸ್ಥಳೀಯ ನಾಗರೀಕರ ಖಂಡನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೨; ನಗರದಲ್ಲಿ ಮಾದರಿ ಬಡಾವಣೆ’ ಎಂದು ಕರೆಯಲ್ಪಡುವ ಎಂ.ಸಿ.ಸಿ, ‘ಬಿ’ ಬ್ಲಾಕ್ ಬಡಾವಣೆಯು ಸ್ವಚ್ಛತೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಒಳ್ಳೆಯ ಪ್ರಶಂಸೆ ಪಡೆದಿದೆ. ಇಲ್ಲಿನ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ಹೆ ಸರಿಗೆ ಕಳಂಕ ತರುವ ಉದ್ದೇಶದಿಂದ ಅವರ‌ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಎಂಸಿಸಿ ಬಿ ಬ್ಲಾಕ್ ನಾಗರೀಕರಾದ ಭರತ್ ಮೈಲಾರ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ್‌ರವರು ಬಡಾವಣೆಯ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ .ಸ್ವಿಮಿಂಗ್ ಫುಲ್ ಪಕ್ಕದಲ್ಲಿರುವ ಪುನೀತ್ ಆನಂದವನ ಉದ್ಯಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ಸಾರ್ವಜನಿಕರನ್ನು ಆಕರ್ಷಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪುನೀತ್ ಪುತ್ಥಳಿ ಎದುರುಗಡೆ ಶಿಥಿಲವಾದ ಸ್ಥಿತಿಯಲ್ಲಿರುವ ಧ್ವಜಸ್ತಂಭವು ಸರಿಯಾಗಿ ಉಪಯೋಗವಾಗುತ್ತಿಲ್ಲ. ಓಡಾಡುವ ರಸ್ತೆಯ ಮಧ್ಯೆ ಇದೆ. ಪುನಿತ್ ರಾಜ್ ಕುಮಾರ್ ಪುತ್ಥಳಿಗೆ ಅಡ್ಡವಾಗಿದೆ.ಆದ್ದರಿಂದ ಅದನ್ನು ಸಾರ್ವಜನಿಕರಿಗೆ ಕಾಣುವ ರೀತಿ ಜೊತೆಗೆ ಈಜುಕೊಳದ ಕ್ರೀಡಾಪಟುಗಳಿಗೂ ಉಪಯೋಗವಾಗುವ ರೀತಿಯಲ್ಲಿ ಅದನ್ನು ಸ್ಥಳಾಂತರಿಸಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕರು ನೀಡಿದ ಮನವಿಗಳ ಆಧಾರದ ಮೇಲೆ ಈ ಕೆಲಸ ಮಾಡಲು ಮುಂದಾಗಿದ್ದಾರೆ.ಇದನ್ನು ಸರಿಯಾಗಿ ತಿಳಿಯದೇ ಏಕಾಏಕಿ ಗಡಿಗುಡಾಳ್ ಮಂಜುನಾಥ್ ಮೇಲೆ ಆರೋಪ ಮಾಡಿರುವುದು ಖಂಡನೀಯ. ಪಾಲಿಕೆಗೆ ಸಾರ್ವಜನಿಕರಿಂದ  ಮನವಿಗಳು ಬಂದ ನಂತರ ಈ ಉದ್ಯಾನವನದ ಸ್ವಚ್ಛತೆಯ ಕಡೆ ಗಮನ ಹರಿಸಿದ್ದಾರೆ ಎಂದರು.ಶಿಥಿಲ ಸ್ಥಿತಿಯಲ್ಲಿದ್ದ ಧ್ವಜಸ್ತಂಭವನ್ನು ಸ್ಥಳಾಂತರಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಇದನ್ನು ನಿರ್ಮಿಸಲು ಹೊರಟಿದ್ದಾರೆ.ಅವರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿ ಇವರ ಹೆಸರಿಗೆ ಮಸಿ ಬಳಿಯಲು ಹೊರಟಿರುವ ಕೆ.ಟಿ ಗೋಪಾಲಗೌಡರ ಹೇಳಿಕೆ ಸರಿಯಲ್ಲ ಎಂದರು.ಧ್ವಜಸ್ತಂಭ ಧ್ವಂಸ ಎಂಬ ಪದ ಬಳಕೆ ಮಾಡಿ ಅವರ ಮೇಲೆ ಸುಳ್ಳು ಆರೋಪ ಮಾಡಿರುವುದು ಬಡಾವಣೆಯ ನಾಗರಿಕರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಕನ್ನಡ ವಿರೋಧಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಎಂಸಿಸಿ ಬಿ ಬ್ಲಾಕ್ ನಾಗರೀಕರಾದ ಮೇಕಾ ಸತ್ಯನಾರಾಯಣ, ಎಸ್.ಎಂ ಮುರುಗೇಶ್,ಮಂಜುನಾಥ್, ಆರ್.ಜಿ ಪ್ರಕಾಶ್,ಗುರುಶಾಂತರಾಜ್,ಕೊಟ್ರೇಶ್ ಉಪಸ್ಥಿತರಿದ್ದರು.