ಪಾಲಿಕೆ ವಿರೋಧ ಪಕ್ಷ ನಾಯಕರು ಕನ್ನಡ ಮಾತನಾಡಲು ಆಗ್ರಹ

ಕಲಬುರಗಿ,ಜು 26: ಕಲಬುರಗಿ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕರು ಆಡಳಿತ ಭಾಷೆ ಕನ್ನಡದಲ್ಲಿ ಮಾತನಾಡಬೇಕು ಎಂದು
ಕರವೇ, ಕಾವಲುಪಡೆ ಜಿಲ್ಲಾಧ್ಯಕ್ಷ ಅಮಿತ ಎಮ್.ನಾಲವಾರಕರ್ ಮನವಿ ಮಾಡಿದ್ದಾರೆ.25 ರಂದು ರಂದು ಎಲ್ ಅಂಡ್ ಟಿ ಕುಡಿಯುವ ನೀರಿನ ಘಟಕದ ಕಾಮಗಾರಿ ಮೇಳೆ ಬಾಲಕರು ನಿಧನರಾಗಿದ್ದು,ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದು ಸ್ವಾಗತ.ಆದರೆ ಕಲಬುರಗಿ ಮಹಾ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಜ್ಮಲ್ ಗೋಲಾ ಅವರು ಸಿಬ್ಬಂದಿಗಳ ಜೊತೆಯಲ್ಲಿ ಆಡಳಿತ ಭಾಷೆ ಕನ್ನಡದಲ್ಲಿ ಮಾತನಾಡದೆ ಹಿಂದಿ ಅಥವಾ ಉರ್ದು ಭಾಷೆಯಲ್ಲಿ ಮಾಹಿತಿ ಪಡೆದ ಘಟನೆ ಖಂಡನೀಯ. ವಿರೋಧ ಪಕ್ಷದ ನಾಯಕರು ಇನ್ನೂ ಮಂದೆ ಯಾವುದೇ ಸಭೆಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕು.ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ರವರಿಗೆ ಕೂಡ ಕನ್ನಡ ಭಾಷೆಯನ್ನು ಮಾತನಾಡಲು ತೊಂದರೆ ಇದ್ದು,ನಂತರ ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲಿ ಮಾತನಾಡುತ್ತಿದ್ದರು.ಅದೇ ಮಾದರಿಯಲ್ಲಿ ಕನ್ನಡ ಭಾಷೆಯನ್ನು ಕಲಿತು ಮಾತನಾಡುವುದು ಸೂಕ್ತ ಎಂದಿದ್ದಾರೆ.