ಪಾಲಿಕೆ ವಿಪಕ್ಷ ಸದಸ್ಯರಿಂದ ಅವರಗೊಳ್ಳದ ಘನ ತ್ಯಾಜ್ಯ ಕಸವಿಲೇವಾರಿ ಘಟಕಕ್ಕೆ ಬೇಟಿ

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಮನಗಂಡು ಪಾಲಿಕೆ ವಿಪಕ್ಷನಾಯಕ ಏ.ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಅವರಗೊಳ್ಳ ದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಸದಸ್ಯರು, ನಗರದಲ್ಲಿ ಪ್ರತಿದಿನ ೧೬೦ ರಿಂದ ೧೬೫ ಟನ್ ಕಸ ಸಂಗ್ರಹವಾಗುತ್ತಿದ್ದು ಆದರೆ ಕಳೆದ ೧೫ ದಿನಗಳಿಂದ ಪ್ರತಿದಿನ ಕೇವಲ ೧೨೦ ರಿಂದ ೧೨೧ ಟನ್ ಕಸ ಸಂಗ್ರಹವಾಗುತ್ತಿದೆ, ಕಸ ಸರಿಯಾಗಿ ಸಂಗ್ರಹವಾಗದೆ ನಗರದ ಸ್ವಚ್ಛತೆ ಮತ್ತು ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಈ ಮಾಹಿತಿಯಿಂದ ತಿಳಿಯುತ್ತದೆ ಎಂದು ಏ.ನಾಗರಾಜ್ ತಿಳಿಸಿದರು.

ಅವರಗೊಳ್ಳಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಭಾರಿ ವಾಹನಗಳ ಮೂಲಕ ಕಸ ಸಾಕಾಣಿಕೆ ತೊಂದರೆಯಾಗುತ್ತಿದ್ದು ಟ್ರ್ಯಾಕ್ಟರ್ ಗಳನ್ನು ಹೆಚ್ಚೆಚ್ಚು ಮಾಡಿ ಕಸ ವಿಲೇವಾರಿ ಮಾಡಬೇಕು ಎಂದು ಆಯುಕ್ತರಿಗೆ ತಿಳಿಸಿದರು.

ಆರೋಗ್ಯ ಅಧಿಕಾರಿಗಳ ಸಭೆ ಕರೆದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಜೆ.ಡಿ. ಪ್ರಕಾಶ್, ವಿನಾಯಕ ಪೈಲ್ವಾನ್, ಸೈಯದ್ ಚಾರ್ಲಿ ಹಾಗೂ ಕಾಂಗ್ರೆಸ್ ಮುಖಂಡ ಉಮೇಶ್ ಉಪಸ್ಥಿತರಿದ್ದರು.