ಪಾಲಿಕೆ ವಾರ್ಡುಗಳ ಮೀಸಲಾತಿ ಪ್ರಕರಣ ತೀರ್ಪು ಏ.12 ಕ್ಕೆ

ಬಳ್ಳಾರಿ ಏ 08: ಪಾಲಿಕೆಯ 23, 10, 24 ಮತ್ತು 25 ನೇ ವಾರ್ಡುಗಳ ಮೀಸಲಾತಿ ಪ್ರಶ್ನಿಸಿ ಕೆಲವರು ಧಾರವಾಡದ ಹೈಕೋರ್ಟ್​ ಮೊರೆ ಹೋಗಿದ್ದರು. ಇದರಿಂದ ಎರೆಡು ವರ್ಷ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ.

ಪ್ರಕರಣದ ವಿಚಾರಣೆಯನ್ನು ನಡೆಸಿರುವ ಕೋರ್ಟು ಈ ಸಂಬಂಧ ವಿಚಾರಣೆಯನ್ನು ಮತ್ತೆ ಎ‌12 ಕ್ಕೆ ಮುಂದೂಡಿದೆ. ಇಂದು ಈ ಬಗ್ಗೆ ತೀರ್ಪು ಪ್ರಕಟವಾಗಬೇಕಿತ್ತು.
ಆದರೆ ಮತ್ತೆ ಮುಂದೂಡಲಾಗಿದೆ.

ಈ ಮಧ್ಯೆ ರಾಜ್ಯ ಚುನಾವಣೆ ಆಯೋಗ ಚುನಾವಣೆಯನ್ನು ಘೋಷಿಸಿದ್ದು ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಇಂದು ನ್ಯಾಯಾಲಯದ ತೀರ್ಪು ಏನಾಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲವಿತ್ತು.
ಚುನಾವಣೆ ಘೋಷಣೆ ಆಗಿರುವ ಬಗ್ಗೆ ವಾದಿಗಳ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರೆ. ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂಧನೆ ಕೇಸು ದಾಖಲಿಸಿ ಎಂದರಂತೆ.