ಪಾಲಿಕೆ ವಾರ್ಡ್‌ ೨೫೦ಕ್ಕೆ ಹೆಚ್ಚಿಸಲು ಚಿಂತನೆ

ಬೆಂಗಳೂರು, ಜೂ.೯- ಇದೇ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಸಿ ರಾಜಧಾನಿ ಬೆಂಗಳೂರಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷವೂ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು ೨೫೦ ಕ್ಕೇರಿಸಲು ಗಂಭೀರ ಚಿಂತನೆ ನಡೆಸಿದೆ.ಇನ್ನೂ, ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ರಚನೆಯಾಗಿದ್ದು, ನಾಳೆ (ಜೂ.೧೦) ಅಥವಾ ಸೋಮವಾರ ವಾರ್ಡ್ ಮರುವಿಂಗಡಣೆ ವರದಿ ಸಲ್ಲಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ, ಈ ಸಮಿತಿ ಬೆಂಗಳೂರಿನ ಸಚಿವರು, ಶಾಸಕರು, ಕಾಂಗ್ರೆಸ್ ಮಾಜಿ ಮೇಯರ್ ಹಾಗೂ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ.ಒಂದು ವೇಳೆ ಈ ವರದಿಯನ್ನು ಸರ್ಕಾರ ಒಪ್ಪಿದರೇ ಮುಂದಿನ ಮೂರು ತಿಂಗಳಲ್ಲಿಯೇ ಪಾಲಿಕೆ ಚುನಾವಣೆ ನಡೆಯುವುದು ಖಚಿತ ಎಂದು ಮೂಲಗಳು ಹೇಳಿವೆ.ವರದಿಯಲ್ಲಿರುವ ಅಂಶಗಳೇನು: ವಾರ್ಡ್ ವಿಗಂಡನೆಯಲ್ಲಿನ ಸಮಸ್ಯೆಯನ್ನು ಮೀಸಲಾತಿ ಯಲ್ಲಿ ಸರಿಪಡಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಸಲಹೆ ನೀಡಲಾಗಿದೆ.ಮುಂದಿನ ಮೂರು ತಿಂಗಳದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಮನವಿ ಮಾಡಲಾಗಿದೆ. ಕಾಂಗ್ರೆಸ್ ಪರ ಅಲೆ ಇದೆ ಕೂಡಲೇ ಚುನಾವಣೆ ನಡಿಸಿದರೇ ಅಧಿಕಾರ ಪಡೆಯಬಹುದು ಎಂದು ಸದಸ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಅಲ್ಲದೆ, ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಮತ್ತೆ ಕೈಹಾಕದಿರುವ ನಿರ್ಧಾರ ಸಾಧ್ಯತೆ ಇದ್ದು, ೨೪೩ ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ ೧೯೮ ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಬಿಬಿಎಂಪಿ ಮಾಜಿ ಸದಸ್ಯರು ಮನವಿ ಮಾಡಿದ್ದಾರೆ.