ಪಾಲಿಕೆ ಬಿಜೆಪಿ ಸದಸ್ಯರ ಜೊತೆಗೆ ತಡರಾತ್ರಿ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ: ಯತ್ನಾಳ ಪರ ಬಿಜೆಪಿ ಸದಸ್ಯರ ಮನವೊಲಿಸಲು ಯತ್ನ

ವಿಜಯಪುರ,ಡಿ.31:ವಿಜಯಪುರ ಮಹಾನಗರಪಾಲಿಕೆಯ ಬಿಜೆಪಿ ಸದಸ್ಯರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ತಡರಾತ್ರಿ ಸಭೆ ನಡೆಸಿದರು.
ನಿಗದಿತ ಕಾರ್ಯಕ್ರಮದ ಬಳಿಕ ವಾರ್ಡ್ ನಂಬರ್ 12 ರ ಪಾಲಿಕೆ ಸದಸ್ಯೆ ರಶ್ಮಿ ಕೋರಿ ನಿವಾಸದಲ್ಲಿ ವಿಜಯೇಂದ್ರ ಪಾಲಿಕೆ ಬಿಜೆಪಿ ಸದಸ್ಯರ ಸಭೆ ನಡೆಸಿ ಜನವರಿ 9 ರಂದು ನಡೆಯಲಿರುವ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ರಣತಂತ್ರ ರೂಪಿಸಲು ಸದಸ್ಯರೊಂದಿಗೆ ಸುದೀರ್ಘ
ಸಮಾಲೋಚನೆ ನಡೆಸಲಾಯಿತು.
ವಿಜಯೇಂದ್ರ ನೇತೃತ್ವದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ಆಗಮಿಸದ ಹಿನ್ನೆಲೆ ಪ್ರತ್ಯೇಕವಾಗಿ ಭೇಟಿಯಾಗುವ ಪ್ರಸ್ತಾಪ ಇಟ್ಟಿದ್ದ ಸದಸ್ಯರು
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಪಾಲಿಕೆ ಸದಸ್ಯರನ್ನ ಭೇಟಿ ಮಾಡಿ ಸಭೆ ನಡೆಸಿದರು.
ಯತ್ನಾಳ್ ಹಾಗೂ ಯಡಿಯೂರಪ್ಪ, ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುಕೊಳ್ಳುವಂತೆ ಮನವಿ ಮಾಡಿದ ಸದಸ್ಯರು
ಇಬ್ಬರ ಕಚ್ಚಾಟದಲ್ಲಿ ಸದಸ್ಯರಾದ ನಮಗೆ ಸಮಸ್ಯೆಯಾಗುತ್ತಿದೆ.
ಈ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ ಪಾಲಿಕೆ ಸದಸ್ಯರು
ಈ ಬಗ್ಗೆ ಕೇಂದ್ರದವರು ನಿರ್ಧಾರ ಮಾಡುತ್ತಾರೆ ಎಂದು ವಿಜಯೆಂದ್ರ ಹೇಳಿದರು.
ಯತ್ನಾಳ್ ನೇತೃತ್ವದಲ್ಲಿ ಅತೀ ಹೆಚ್ಚು ಮಹಾನಗರ ಪಾಲಿಕೆ ಸದಸ್ಯರು ಗೆಲುವು ಸಾಧಿಸಿದ್ದಾರೆಂದು ಯತ್ನಾಳ ಪರ ಮಾತನಾಡಿದ ಸದಸ್ಯ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ ಹಾಗೂ ಇತರ ಸದಸ್ಯರು, 35 ಸದಸ್ಯ ಬಲದ ಪಾಲಿಕೆ ಚುಕ್ಕಾಣಿ ಹಿಡಿಯಲು ಎಲ್ಲರೂ ಪ್ರಯತ್ನ ಮಾಡಬೇಕೆಂದು ಒತ್ತಾಯ ಮಾಡಿದರು.
ಪಾಲಿಕೆ ಸದಸ್ಯರ ಒತ್ತಾಯದ ಮೇರೆಗೆ ಓರ್ವ ಜೆಡಿಎಸ್ ಸದಸ್ಯನ ಬೆಂಬಲ ನೀಡಬೇಕೆಂದು ಕುಮಾರಸ್ವಾಮಿಗೆ ಕರೆ ಮಾಡಿದ ವಿಜಯೇಂದ್ರ,
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗಿರುವ ಓರ್ವ ಜೆಡಿಎಸ್ ಸದಸ್ಯ
ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತಚಲಾಯಿಸುವಂತೆ ಜೆಡಿಎಸ್ ಸದಸ್ಯನಿಗೆ ನಿರ್ದೇಶನ ನೀಡಬೇಕೆಂದು ಕುಮಾರಸ್ವಾಮಿಗೆ ಮನವಿ ಮಾಡಿದರು.
ಬರುವ ಜನವರಿ 9 ರಂದು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಮೇಯರಗ ಸ್ಥಢನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಉಪ ಮೇಯರ್ ಸ್ಥಾನ ಎಸ್.ಟಿ ವರ್ಗಕ್ಕೆ ಮೀಸಲಾಗಿದೆ.