ಪಾಲಿಕೆ ಪೌರ ಕಾರ್ಮಿಕರಿಗೆ ಬೂಸ್ಟರ್ ಡೋಸ್


ದಾವಣಗೆರೆ.ಜ.೧೫; ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಪಾಲಿಕೆ ಪೌರ ಕಾರ್ಮಿಕರಿಗೆ ಮತ್ತು ನೌಕರರಿಗೆ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು  ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಇತರೆ  ನೌಕರರಿಗೆ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಕಂದಾಯಾಧಿಕಾರಿ ಕೆ. ನಾಗರಾಜ, ಕಂದಾಯ ಶಾಖೆ ವ್ಯವಸ್ಥಾಪಕರಾದ ಪಿ. ವೆಂಕಟೇಶ್ ಆರೋಗ್ಯ ಇಲಾಖೆಯ ಡಾ. ವೆಂಕಟೇಶ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಸಿ. ಬಸವರಾಜ ಸೇರಿದಂತೆ ಅನೇಕ ಅಧಿಕಾರಿ,ನೌಕರರು ಉಪಸ್ಥಿತರಿದ್ದರು.