ಪಾಲಿಕೆ ಚುನಾವಣೆ 27 ನೇ ವಾರ್ಡಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆರಾಲ್ಡ್ (ಜೆರ್ರಿ)

ಬಳ್ಳಾರಿ, ಏ.08: ಸಂಕಷ್ಟದಲ್ಲಿ ಇದ್ದೀವಿ ಎಂದು ತಮ್ಮದೇ, ಇಲ್ಲವೇ ಬೇರೊಂದು ಸಮುದಾಯದವರು ಕೇಳಿಕೊಂಡು ಬಂದಾಗ ಸಹಾಯ ಹಸ್ತ ಚಾಚುವ ಕ್ರೈಸ್ತ ಸಮುದಾಯದ ಮುಖಂಡ ಎ.ವಿ. ಜೆರಾಲ್ಡ್(ಜೆರ್ರಿ) ಅವರು ನಗರದ ಅಭಿವೃದ್ದಿ ಮತ್ತು ಜನ ಸೇವೆಗಾಗಿ ಈ ಬಾರಿ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 27 ನೇ ವಾರ್ಡಿನಿಂದ ಸ್ಪರ್ಧೆ ಮಾಡಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರು. ನಗರದ ಸಂತ ಅಂತೋನಿ ಪ್ರಧಾನ ದೇವಾಲಯದ ಪಾಲನಾ ಮಂಡಳಿಯ ಸದಸ್ಯರು, ಬಳ್ಳಾರಿ ಡ್ಯೋಸಿಸ್ ಕ್ಯಾಥೋಲಿಕ್ ಸಂಘದ ಉಪಾಧ್ಯಕ್ಷರು. ದ್ವಿಚಕ್ರ ವಾಹನದ ದುರಸ್ತಿಗಾರರ ಸಂಘದ ಸದಸ್ಯರಾಗಿರುವ ಇವರು ಬಳ್ಳಾರಿ ನಗರಾಭಿವೃದ್ಧಿಕಾರ (ಬುಡಾ) ದ ಮಾಜಿ ಸದಸ್ಯರಾಗಿ, ಬಳ್ಳಾರಿ ಡಯೋಸಿಸ್ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಸಿದ್ದಾರೆ.
ಕಳೆದ 2017 ರಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರಿಸಿಕೊಂಡು ಅವರ ಕಟ್ಟಾ ಬೆಂಬಲಿಗರಾಗಿರುವ ಇವರು. ಸರಳ ನಡೆ ನುಡಿಯ, ಸಹೋದರ ಮನೋಭಾವದ, ಸಮಬಾಳು, ಸಮಪಾಲು ಎಂಬ ವ್ಯಕ್ತಿತ್ವ ಹೊಂದಿರುವ ಇವರು. ಪ್ರತಿಯೊಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತವಾಗಿ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲ ಪಾಲ್ಗೊಂಡು ಯಶಸ್ವಿಗೊಳಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ.
ಶಾಲಾ ಮಕ್ಕಳಿಗೆ, ಬಡ ಜನತೆಗೆ ಅನೇಖ ರೀತಿಯಲ್ಲಿ ಸಹಾಯ ಮಾಡಿರುವ ಇವರು ನಾನೇನು ಆಗರ್ಭ ಶ್ರೀಮಂತನಲ್ಲ. ಆದರೆ ಆ ಜೀಸಸ್ ನೀಡಿರುವ ಒಂದಿಷ್ಟರಲ್ಲಿ, ಮತ್ತೊಂದಿಷ್ಟು ಹಂಚಿ ತಿನ್ನುವ ಮಹದಾಸೆ ನನ್ನದು ಎನ್ನುತ್ತಾರೆ.
ಕಳೆದ ಮೂವತ್ತು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತ ಬಂದಿರುವ ಇವರು ಈಗ 27 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿದ್ದು. ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.