ಪಾಲಿಕೆ ಚುನಾವಣೆ 20 ನೇ ವಾರ್ಡಿನಲ್ಲಿ ಎಸ್ಟಿ, ವೈಶ್ಯ, ಬ್ರಾಹ್ಮಣರಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಭಿನ್ನಮತದ ಹೊಗೆ

ಎನ್.ವೀರಭದ್ರಗೌಡ
ಬಳ್ಳಾರಿ: ಕಳೆದ ಬಾರಿಯ 19 ನೇ ವಾರ್ಡು, ವಾರ್ಡುಗಳ ವಿಭನಜನೆಯಿಂದ 20 ನೇ ವಾರ್ಡ್ ಆಗಿದೆ. ಈ ಬಾರಿ ಮೀಸಲಾತಿ ಸಮಾನ್ಯವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಅಂದು ಜೆಡಿಎಸ್‍ನಲ್ಲಿದ್ದ ಇಂದು ಕಾಂಗ್ರೆಸ್‍ನಲ್ಲಿರುವ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಬೆಂಬಲದೊಂದಿಗೆ ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ರೇಣುಕಾ ಕೃಷ್ಣ ಅವರು ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡರು.
ಅವರ ಪತಿ ಕೃಷ್ಣ(ಕಿಟ್ಟಿ) ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಇದಕ್ಕೆ ಮುಖಂಡರು ಸಹ ಆಂತರಿಕವಾಗಿ ಎಲ್ಲರಿಗೂ ಕರೆದು ಕಿಟ್ಟಿ ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆಂದು ಕಿಟ್ಟಿ ಹೇಳಿಕೊಂಡು ಓಡಾಡುತ್ತಿದ್ದಾರೆ.
ಮಹಿಳಾ ಮೋರ್ಚಾಗೆ ಆಧ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ಇದೇ ವಾರ್ಡಿನಿಂದ ಸ್ಪರ್ಧೆ ಮಾಡಲು ಬಿಜೆಪಿ ಮಹಿಳಾ ಮೋರ್ಚಾದ ನಗರ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಅವರು ಸಹ ತಮಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದಾರಂತೆ. ಈ ವಾರ್ಡಿನಲ್ಲಿ ನೀಡಿದರೆ ಚುನಾವಣಾ ವೆಚ್ಚವನ್ನು ನಾವೇ ಮಾಡಿಕೊಳ್ಳುತ್ತೇವೆ. ಸಮಾಧಾನ ಪಡಿಸಲು ಬೇರೆ ವಾರ್ಡಿನಲ್ಲಿ ಟಿಕೆಟ್ ನೀಡಿದರೆ ನೀವೇ ವೆಚ್ಚ ಮಾಡಬೇಕು ಎಂದು ಮುಖಂಡರಿಗೆ ಹೇಳಿದ್ದಲ್ಲದೆ. ತಮಗೆ ಟಿಕೆಟ್ ನೀಡದೇ ಕಿಟ್ಟಿ ಅವರಿಗೆ ಟಿಕೆಟ್ ನೀಡಿದರೆ ನಾವು ಸಹಾಯ ಮಾಡಲ್ಲ ಎಂದು ಸಹ ಹೇಳಿದ್ದಾರಂತೆ.
ಇವರಲ್ಲದೆ, ರಿಯಲ್ ಎಸ್ಟೇಟ್, ಕನ್ಸ್ರಕ್ಷನ್ ವ್ಯವಾಹರದಲ್ಲಿ ತೊಡಗಿಕೊಂಡಿರುವ ವೈಶ್ಯ ಸಮುದಾಯದ ಮಾರುತಿ ಪ್ರಸಾದ್ ಅವರು ಸಹ 20 ನೇ ವಾರ್ಡಿನಿಂದ ಸ್ಪರ್ಧೆ ಮಾಡಲು ಬಯಸಿ ಅರ್ಜಿ ನೀಡಿದ್ದಾರಂತೆ. ನಗರದಲ್ಲಿ ಈವರೆಗೆ ನಮ್ಮ ಸಮುದಾಯ ಬಿಜೆಪಿ ಬೆಂಬಲಿಸಿಕೊಂಡು ಬಂದಿದೆ. ಬುಡಾ ಅಧ್ಯಕ್ಷ ಸ್ಥಾನ ನೀಡಲಿಲ್ಲ, ಯಾವೊಂದು ಸ್ಥಾನಮಾನ ನೀಡಿದ ಕಾರಣ ಈಗ ಟಿಕೆಟ್ ನೀಡಿ. 19 ವಾರ್ಡು ಸಮಾನ್ಯವಾಗಿದೆ. ಅಲ್ಲಿಯೂ ಎಸ್ಟಿಗೆ ಟಿಕೆಟ್ ನೀಡಿದೆ. 20 ವಾರ್ಡು ಸಹ ಸಮಾನ್ಯವಾಗಿದೆ ಅಲ್ಲಿಯೂ ಎಸ್ಟಿಗಳಿಗೆ ಟಿಕೆಟ್ ನೀಡಿದರೆ ಸಮಾನ್ಯವರ್ಗದ ನಾವು ಎಲ್ಲಿಗೆ ಹೋಗಬೇಕು ಎಂದು ಸಮುದಾಯದ ಮುಖಂಡರು ಪ್ರಶ್ನೆ ಎತ್ತಿದ್ದಾರಂತೆ.
ಇದೇ ಪ್ರಶ್ನೆ ಬ್ರಾಹ್ಮಣ ಸಮುದಾಯದವರದ್ದೂ ಸಹ ಆಗಿದೆಯಂತೆ. ನಮ್ಮ ಸಮುದಾಯವೂ ಬಿಜೆಪಿ ಪರವಾಗಿಯೇ ಇದೆ. ಸಾಮಾನ್ಯ ಬಂದಿರುವಾಗ ನಮ್ಮ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿ ಎಂದು ಕೇಳಿದ್ದಾರಂತೆ.
ಈ ವಾರ್ಡಿನಲ್ಲಿ 1500 ಕ್ಕೂ ಹೆಚ್ಚಿ ಎಸ್ಟಿ ಅದೇ ರೀತಿ ಬ್ರಾಹಣರು, ವೈಶ್ಯ ಮತ್ತು ಸಮುದಾಯದವರು ಪ್ರಬಲ ಸಂಖ್ಯೆಯಲ್ಲಿ ಇದ್ದು ಯಾರಿಗೆ ಟಿಕೆಟ್ ಕೊಡಬೇಕೆಂಬುದು ಈಗ ಬಿಜೆಪಿಗೆ ತಲೆನೋವಾಗಿದಯಂತೆ. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಮತ್ತು ಪಕ್ಷ ಅಂತಿಮವಾಗಿ ಯಾವ ತೀರ್ಮಾನಕ್ಕೆ ಬರುತ್ತೆ ಎಂಬುದನ್ನು ಕಾದು ನೀಡಬೇಕಿದೆ.
ಇನ್ನು ಈ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗಬೇಕು ಎಂಬುದನ್ನು ನಿರ್ಧರಿಸುವುದು ಬಹುತೇಕ ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಅವರೇ ಎಂದು ಹೇಳಲಾಗುತ್ತಿದೆ. ಮಾಜಿ ಮೇಯರ್ ನಾಗಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿವೇಕ್ (ವಿಕ್ಕಿ) ಕಳೆದ ಬಾರಿ ಬಿಎಸ್‍ಆರ್ ಗುಂಪನಿಲ್ಲಿದ್ದ ಬಲಿಜ ಸಮುದಾಯದ ರಾಜೇಶ್, ಪಿಂಜಾರ ಸಮುದಾಯ ನಗರ ಅಧ್ಯಕ್ಷ ಬಿಎಂ.ರಫಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಬಯಸಿದ್ದಾರಂತೆ.
ಬಹುತೇಕ ವಿವೇಕ್ ಅವರಿಗೆ ಟಿಕೆಟ್ ನೀಡುತ್ತಾರೆಂಬ ಮಾತುಗಳು ಕೇಳಿ ಬಂದಿವೆ. ರಾಜೇಶ್ ಮತ್ತು ರಫಿ ಅವರು ತಮಗೆ ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕಾಗುತ್ತೆಂಬ ನಿರ್ಧಾರಕ್ಕೆ ಬಂದಿದ್ದಾರಂತೆ.

ಕೃಷ್ಣ(ಕಿಟ್ಟಿ)

ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ನಂಬಿಕೆ ಇದೆ
ಕೃಷ್ಣ(ಕಿಟ್ಟಿ)

ಮಾರುತಿ ಪ್ರಸಾದ್.

ನಮ್ಮು ಸಮುದಾಯಕ್ಕೆ ಆಧ್ಯತೆ ನೀಡಿ
ಮಾರುತಿ ಪ್ರಸಾದ್.

ಜ್ಯೋತಿ ಪ್ರಕಾಶ್.

ನಮಗೂ ಅವಕಾಶ ನೀಡಿ
ಜ್ಯೋತಿ ಪ್ರಕಾಶ್
.

ವಿವೇಕ್ (ವಿಕ್ಕಿ)

ಪಕ್ಷದ ನಿರ್ಣಯಕ್ಕೆ ಬದ್ಧ
ವಿವೇಕ್ (ವಿಕ್ಕಿ)

ರಾಜೇಶ್

ನಮ್ಮ ಸಮಾಜ ಸೇವೆ ಪರಿಗಣಿಸಿ
ರಾಜೇಶ್

ಬಿ.ಎಂ.ರಫ

ಪಿಂಜಾರ ಸಮುದಾಯದ ನಿರ್ಲಕ್ಷ ಬೇಡ
ಬಿ.ಎಂ.ರಫ