ಪಾಲಿಕೆ ಚುನಾವಣೆ 19 ನೇ ವಾರ್ಡಿನಲ್ಲಿ ಪ್ರತಿಸ್ಪರ್ಧಿ ಯಾರು ? 18 ರಲ್ಲಿ ಬಿಜೆಪಿ ಟಿಕೆಟ್‍ಗೆ ಪೈಟ್ 17 ಕ್ಕೆ ಕೆರಕೋಡಪ್ಪ ಕುಟುಂಬ ಶಿಫ್ಟ್

ಎನ್.ವೀರಭದ್ರಗೌಡ
ಬಳ್ಳಾರಿ, ಏ.2- ಈ ತಿಂಗಳ 27 ಕ್ಕೆ ಮಹೂರ್ತ ಫಿಕ್ಸ್ ಆಗಿರುವ ಪಾಲಿಕೆ ಚುನಾವಣೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದ 17, 18, 19 ನೇ ವಾರ್ಡಿನಲ್ಲಿ ಮತ್ತೆ ಕಾಂಗ್ರೆಸ್ ಬಿಜೆಪಿ ನಡುವೆಯೇ ಪೈಟ್ ಏರ್ಪಡಲಿದೆ. ವಾರ್ಡು ವಿಂಗಡಣೆಯಿಂದ ಕಳೆದ ಬಾರಿಯ 17 ನೇವಾರ್ಡು ಪ್ರದೇಶ ಈಗ 18 ಮತ್ತು 17 ನೇವಾರ್ಡುನಲ್ಲಿ ಹಂಚಿದೆ, 19 ನೇ ವಾರ್ಡು 19 ಆಗಿದೆ.
ಕಳೆದ ಬಾರಿ 17 ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಎಸ್‍ಆರ್ ಪಕ್ಷದ ಅಭ್ಯರ್ಥಿ ತಿಪ್ಪೇರುದ್ದ ಅವರ ವಿರುದ್ದ ಜಯ ಸಾಧಿಸಿದ್ದ ಕೆರಕೋಡಪ್ಪ ಅವರು. ಈ ಬಾರಿ, ಓಬಿಸಿ ಮಹಿಳೆಗೆ ಮೀಸಲಾಗಿರುವ 17 ನೇ ವಾರ್ಡಿನಿಂದ ತಮ್ಮ ಸೊಸೆ ಬಿ.ಕೆ. ಅರುಣಾ ರಮೇಶ್ ಅವರನ್ನು ಕಣಕ್ಕಿಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಇಲ್ಲಿ ಇತರರೂ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.
18 ನೇ ವಾರ್ಡಿನಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲು ವಕೀಲ ಕೆ.ತಿಪ್ಪೇರುದ್ರ ತಮ್ಮ ಬಿಜೆಪಿ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ನಿಂದ. ಬಳ್ಳಾರಿ ಡಿಕೆಶಿ ಎಂದೇ ಕರೆಯುವ ಕಾಂಗ್ರೆಸ್ ಮುಖಂಡ ಮತ್ತು ಪಾಲಿಕೆ ಚುನಾವಣೆಯ ಸಂಯೋಜಕರಾಗಿರುವ ಜೆ.ಎಸ್.ಅಂಜನೇಯಲು ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವುದರಿಂದ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಅದಕ್ಕಾಗಿ ಆರ್ಥಿಕವಾಗಿ ಪ್ರಬಲವಾದ ವ್ಯಕ್ತಿಯನ್ನೇ ಇಲ್ಲಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಅದಕ್ಕಾಗಿ ಈ ಹಿಂದೆ ಈ ಕ್ಷೇತ್ರದಿಂದ ಗೆದ್ದು ಮೇಯರ್ ಆಗಿ ಉತ್ತಮ ಕೆಲಸ ಮಾಡಿದ್ದ, ಕಳೆದ ಬಾರಿ 11 ವಾರ್ಡಿನಲ್ಲಿ ಕೊನೆ ಕ್ಷಣದಲ್ಲಿ ಸ್ಪರ್ಧೆ ಮಾಡಿ ಜಯ ಕಾಣದ ಕೆ.ಬಸವರಾಜ್ ಅವರನ್ನು ಕಣಕ್ಕಿಳಿಸಬೇಕೆಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಅಚಿಜನೇಯಲು ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸುವುದನ್ನು ನಿರಾಕರಿಸಿದ್ದಾರೆ. ಇನ್ನು ಈ ವಾರ್ಡಿನಿಂದ ಮಾಜಿ ಕೌನ್ಸಲರ್ ಸತ್ಯನಾರಾಯಣ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷೆ ಜೀವೇಶ್ವರಿ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್ ಸಿದ್ದತೆ ನಡೆಸಿದೆ ಎನ್ನಲಾಗುತ್ತಿದೆ.
19 ನೇ ವಾರ್ಡಿಗೆ ಬಿಜೆಪಿ ಟಿಕೆಟ್ ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಶೋಕ್ ಕುಮಾರ್ ಅವರಿಗೆ ಬಹುತೇಖ ಖಚಿತ. ಅವರು ಕಳೆದ ಬಾರಿ ಇಲ್ಲಿ ಕುಮಾರಸ್ವಾಮಿ ವಿರುದ್ದ ಸೋಲು ಕಂಡಿದ್ದರೂ ವಾರ್ಡಿನ ಜನತೆ ಜೊತೆ ಉತತ್ಮ ಸಂಬಂಧ ಮತ್ತು ವಾರ್ಡಿನಲ್ಲಿ ಸ್ವಚ್ಚತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಚರಂಡಿ ದುರಸ್ಥಿ ಮಾಡಿಸುವುದು, ದಿನಾಲು ಕಸ ಸಂಗ್ರಹಕ್ಕೆ ವಾಹನ ಬಿಟ್ಟಿದ್ದು, ಸಂಕ್ರಾಂತಿ, ರಾಜ್ಯೋತ್ಸವ ಯೋಗ ಶೀಬಿರ ಹೀಗೆ ಅನೇಕ ಕಾರ್ಯಕ್ರಮಗಳ ಆಯೋಜನೆ ಮೂಲಕ ವಾರ್ಡಿನ ಜನರ ಬೆಂಬಲ ಪಡೆದಿದ್ದಾರೆ ಎನ್ನಬಹುದು.
ಕುಮಾರಸ್ವಾಮಿ ಅವರು ಇದ್ದರೆ ಅಶೋಕ್ ಅವರಿಗೆ ಪ್ರಬಲ ಸ್ಪರ್ಧಿಗಳೇ ಆಗಿರುತ್ತಿದ್ದರು, ಆದರೆ ಅವರ ಇಲ್ಲದ ಕಾರಣ ಅಶೋಕ್‍ಗೆ ಪೈಟ್ ನೀಡಬಲ್ಲಂತಹ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ. ದಿ.ಕುಮಾರಸ್ವಾಮಿ ಅವರ ಸಹೋದರ ಮುರುಳಿ ಅವರು ಟಿಕೆಟ್ ಕೇಳಿದ್ದಾರಂತೆ. ಬ್ರಾಹನರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದಿದೆಯಂತೆ. ಆದರೂ ಅಶೋಕ್ ಅವರ ವಿರುದ್ದ ಗೆಲುವಿಗೆ ಕಾಂಗ್ರೆಸ್ ಒಂದಿಷ್ಟು ಕಷ್ಟ ಸಾಧ್ಯ ಎನ್ನಬಹುದು.
ನಾನು ಪ್ರತಿ ಸ್ಪರ್ಧಿ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಮಾಜಿಕ ಕಾರ್ಯಕರ್ತ ಮೇಕಲ ಈಶ್ವರರೆಡ್ಡಿ ಸಿದ್ದರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧೆ ಮಾಡುವವರು ಗೆದ್ದ ಮೇಲೆ ನಮ್ಮ ಮಾತು ಕೇಳುವುದಿಲ್ಲ. ಉತ್ತಮರಾದ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಮ್ಮಂತವರು ಸ್ಪರ್ಧೆ ಮಾಡಿದರೆ ನಾವು ನಿಮಗೆ ಓಟು ಹಾಕುತ್ತೇವೆ ಎಂದು ವಾರ್ಡಿನ ಜನ ಹೇಳುತ್ತಿದ್ದಾರೆ. ಅದಕ್ಕಾಗಿ ಸ್ಪರ್ಧೆಗಳಿಯಲಿದ್ದೇನೆ ಎಂದಿದ್ದಾರೆ ಈಶ್ವರ ರೆಡ್ಡಿ.


ಜನ ಉತ್ತಮರನ್ನು ಆಯ್ಕೆ ಮಾಡಬೇಕು ಎಂದರೆ ಉತ್ತಮ ಜನ ಸ್ಪರ್ಧೆ ಮಾಡಲ್ಲ ಎನ್ನುತ್ತಾರೆ ಮತದಾರರು. ಅದಕ್ಕಾಗಿ ನಗರದ ಅನೇಕ ಸಮಸ್ಯೆಗಳ ಕುರಿತು ಹೋರಾಟ ಮಾಡಿರುವ ನಾನು 19 ನೇ ವಾರ್ಡಿನಿಂದ ಕಣಕ್ಕಿಳಿಯುವೆ ಗೆಲುವು ಸೋಲು ಜನರ ತೀರ್ಮಾನಕ್ಕೆ ಬಿಟ್ಟಿದ್ದು
ಮೇಕಲ ಈಶ್ವರ ರೆಡ್ಡಿ. ಸಮಾಜಿಕ ಕಾರ್ಯಕರ್ತ.

ಮೇಕಲ ಈಶ್ವರ ರೆಡ್ಡಿ. ಸಮಾಜಿಕ ಕಾರ್ಯಕರ್ತ.


ಕಳೆದ ಬಾರಿ ಕೆಲ ಕಾರಣಗಳಿಂದ ಸೋಲು ಆಯ್ತು, ಆದರೂ, ದೃತಿ ಗೆಡದೆ ನಿರಂತರವಾಘಿ ವಾರ್ಡಿನ ಜನರ ಜೊತೆ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವೆ. ಈ ಬಾರಿ ವಾರ್ಡಿನ ಜನ ನನ್ನ ಕೈಬಿಡಲ್ಲ ಎಂಬ ಹೆಚ್ಚಿನನಂಬಿಕೆ ನನಗಿದೆ. ಗೆಲುವು ಖಚಿತ ಎಂದು ಭಾವಿಸಿರುವೆ.
ಕೆ.ಎಸ್.ಅಶೋಕ್ ಕುಮಾರ್.

ಕೆ.ಎಸ್.ಅಶೋಕ್ ಕುಮಾರ್.


ರಾಜಕಾರಣ ನನಗೆ ಹೊಸತು. ಆದರೆ ನಮ್ಮ ಮಾವನವರು ಕಳೆದ ಬಾರಿ ಕಾಪೋರೇಟರ್ ಆಗಿ ವಾರ್ಡಿನ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ನೋಡಿ ಅರಿತಿರುವೆ. ಮಹಿಳೆ ಮನೆ ಕೆಲಸ ಮಾಡಿದರಷ್ಟೇ ಸಾಲದು ಜನ ಸೇವೆಗೂ ಸಿದ್ದ ಎಂಬುದನ್ನು ಮಾಡಿ ತೋರಿಸುವೆ
ಬಿ.ಕೆ.ಅರುಣಾ ರಮೇಶ್. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ಬಿ.ಕೆ.ಅರುಣಾ ರಮೇಶ್. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ನಾನಾಗಿ ಟಿಕೆಟ್ ಬಯಸಲ್ಲ, ಪಕ್ಷದ ಮುಖಂಡರು ಸ್ಪರ್ಧೆ ಮಾಡುವಂತೆ ಕೇಳಿದ್ದಾರೆ. ಯಾರನ್ನೇ ಕಣಕ್ಕಿಳಿಸಿದರೂ ಅವರ ಬೆಂಬಲವಾಗಿ ಕೆಲಸ ಮಾಡುವೆ. ಅಚಿತಿಮವಾಗಿ ಪಕ್ಷದ ಮುಖಂಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿರುರುವೆ.
ಕೆ.ಬಸವರಾಜ್, ಮಾಜಿ ಮೇಯರ್

ಕೆ.ಬಸವರಾಜ್, ಮಾಜಿ ಮೇಯರ್