ಪಾಲಿಕೆ ಚುನಾವಣೆ ಮತದಾರರ ಪಟ್ಟಿಯಲ್ಲಿ ಗೊಂದಲ

ಬಳ್ಳಾರಿ,ಮಾ.30- ನಗರದಲ್ಲಿನ ಪಾಲಿಕೆಯ 35 ವಾರ್ಡುಗಳನ್ನು 39 ವಾರ್ಡ್ ಗಳನ್ನಾಗಿ ವಿಂಗಡಿಸಿ ನಕ್ಷೆ ರೂಪಿಸಿ ಅದರಂತೆ ಸಿದ್ಧಪಡಿಸಿರುವ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಮೂಡಿದ್ದು ಈ ಬಗ್ಗೆ ಅನೇಕರು ಪಾಲಿಕೆ ಆಯುಕ್ತರಿಗೆ ಸರಿಪಡಿಸಲು ಕೋರಿ ನಿನ್ನೆ ಮನವಿ ಸಲ್ಲಿಸಿದ್ದಾರೆ.
ಈ ಮೊದಲ ನಕ್ಷೆ ರೀತಿಯಲ್ಲಿ ಮತದಾರರ ಪಟ್ಟಿ ಸಿದ್ಧವಾಗಿತು, ಆದರೆ ಕೆಲದಿನಗಳ ಹಿಂದೆ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಅನೇಕ ಲೋಪಗಳು ಕಂಡುಬಂದಿವೆ. ಉದಾಹರಣೆಗೆ ಎರಡನೇ ವಾರ್ಡಿನಲ್ಲಿ ಇದ್ದ ಐನೂರಕ್ಕೂ ಹೆಚ್ಚು ಮತದಾರರ ಹೆಸರುಗಳು ಈಗ ಮೂರನೇ ವಾರ್ಡಿನ ಮತದಾರರ ಪಟ್ಟಿಯಲ್ಲಿ ಕಂಡುಬರುತ್ತಿವೆ.ಇದು ಪ್ರಭಾವಿ ಮಾಜಿ ಕಾರ್ಪೋರೇಟ್ ಗಳು ಪಾಲಿಕೆಯ ಸಿಬ್ಬಂದಿಯ ಮೇಲೆ ಪ್ರಭಾವ ಬೀರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏಕೆಂದರೆ ಮತದಾರರ ಒಂದು ವಾರ್ಡಿನಿಂದ ಮತ್ತೊಂದು ವಾರ್ಡಿಗೆ ವರ್ಗಾಯಿಸಬೇಕಾದರೇ ಬಿಎಲ್ಒ ಅವರ ಸಹಿ ಪಡೆಯಬೇಕು. ಆದರೆ ಕಾರ್ಯ ಇಲ್ಲಿ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದೇ ರೀತಿ 20, 24 ಮತ್ತಿತರ ವಾರ್ಡುಗಳಲ್ಲಿ ಅನೇಕರ ಹೆಸರುಗಳು ಮತಗಟ್ಟೆ ಮತ್ತು ವಾರ್ಡಗಳಲ್ಲಿ ಬದಲಾಗಿದ್ದು ಸರಿಪಡಿಸುವಂತೆ ಕೋರಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ತಪ್ಪಿದ್ದರೇ ಸರಿಪಡಿಸಲಿದೇ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೇಹ್ಲೋಟ್ ಹೇಳಿದ್ದಾರೆ.
ಇನ್ನೂ ಒಂದು ವಾರ್ಡಿನಲ್ಲಿ 5000 ಮತದಾರರಿದ್ದರೇ ಮತ್ತೊಂದು ವಾರ್ಡಿನಲ್ಲಿ 11 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ ಹೀಗೆ ವಾರ್ಡಗಳ ವಿಂಗಡಣೆಯೂ ಸಹ ಸಮರ್ಪಕವಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ ಒಟ್ಟಿನಲ್ಲಿ ಹಲವು ರೀತಿ ಗೊಂದಲ ಗೂಡಾಗಿರುವಂತಹ ಮತದಾರರ ಪಟ್ಟಿ ಸರಿಪಡಿಸುವ ಕಾರ್ಯ ಹೇಗೆ ಆಗಲಿದೇ ಎಂಬುದನ್ನು ಕಾದುನೋಡಬೇಕಿದೆ .