ಪಾಲಿಕೆ ಚುನಾವಣೆ ಬಿಜೆಪಿ ಅಭ್ಯರ್ಥಿಗಳಿಗಾಗಿ ನಗರದ ಹಲವಡೆ ಸಚಿವ, ಶಾಸಕರ ಸಭೆ

ಬಳ್ಳಾರಿ, ಮಾ.31: ನಡೆಯಲಿರುವ ಇಲ್ಲಿನ ಮಹಾನಗರ ಪಾಲಿಕೆಯ 39 ವಾರ್ಡುಗಳ ಚುನಾವಣೆಗೆ ಬಿಜೆಪಿ ಪಕ್ಷದ ಮುಖಂಡರು ಭರದ ಸಿದ್ದತೆಗಳನ್ನು ನಡೆಸಿದ್ದಾರೆ. ಪಾಲಿಕೆಯ ಅಧಿಕಾರ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದ ಬಿಜೆಪಿಯವರು ಈ ಬಾರಿ ಅದನ್ನು ಕಾಂಗ್ರೆಸ್ ವಶದಿಂದ ಪಡೆದುಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ನಗರದ ಹಲವು ವಾಡುಗಳಲ್ಲಿ ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆಯಿಂದ ಸಮಾಜ ಕಲ್ಯಾಣ ಸಚಿವ, ಶ್ರೀರಾಮುಲು. ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ರೈತಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ನಗರ ಅಧ್ಯಕ್ಷ ಕೆ.ಬಿ.ವೇಂಕಟೇಶ್ವರ, ಮಾಜಿ ಉಪ ಮೇಯರ್ ಶಿಶಿಕಲಾ, ಅನಿಲ್ ನಾಯ್ಡು, ಮೋತ್ಕರ್ ಶ್ರೀನಿವಾಸ್, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ. ಜಿಲ್ಲಾ ಉಪಾಧ್ಯಕ್ಷ ಎರ್ರಂಗಳಿ ತಿಮ್ಮಾರೆಡ್ಡಿ ಮೊದಲಾದವರು ಆಯಾ ವಾರ್ಡುಗಳಿಗೆ ತೆರಳಿ ಕಿರು ಸಮಾರಂಭಗಳನ್ನು ನಡೆಸಿ. ಸ್ಪರ್ಧಾ ಆಕಾಂಕ್ಷಿಗಳಿಂದ ಅರ್ಜಿ ಪಡೆಯುತ್ತಿದ್ದಾರೆ.
ನಿನ್ನೆ ಒಂದನೇ ವಾರ್ಡು, ಬ್ರಹ್ಮಯ್ಯಗುಡಿ, ಬಸವೇಶ್ವರ ನಗರ, ಸತ್ಯನಾರಾಯಣ ಪೇಟೆ ಮೊದಲಾದೆಡೆ. ಇಂದು ಬೆಳಿಗ್ಗೆ ಮಾರುತಿ ಕಾಲೋನಿ, ಬಾಲಾಂಜಿನೇಯ ಗುಡಿ, ಗುಗ್ಗರಹಟ್ಟಿ, ಕಾರ್ಕಲತೊಟ, ಬಳ್ಳಾರೆಪ್ಪ ಕಾಲೋನಿ, ಬಾಪೂಜಿನಗರ, ಅಂದ್ರಾಳ್, ಮರಿಸ್ವಾಮಿ ಮಠ ಮೊದಲಾದೆಡೆ ಸಭೆಗಳನ್ನು ನಡೆಸಲಾಯಿತು.
ಸಭೆಗಳಲ್ಲಿ ಆಯಾ ವಾರ್ಡಿನ ಮುಖಂಡರು ಪಾಲ್ಗೊಂಡಿದ್ದರು.
ನಗರದ ನಗರಸಭೆ ಮತ್ತು ನಗರ ಪಾಲಿಕೆಯಲ್ಲಿ ಈ ಹಿಂದೆ 2000 ಇಸ್ವಿಯಿಂದ 2014 ರ ವರಗೆ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತದ ಅವಧಿಯಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ದಿ, ವಾರ್ಡುಗಳ ಸ್ವಚ್ಚತೆ, ಉದ್ಯಾನವನಗಳ ಅಭಿವೃದ್ದಿ, ಬೀದಿ ದೀಪಗಳ ಅಳವಡಿಕೆ ಮೊದಲಾದ ಸೌಲಭ್ಯಗಳನ್ನು ಜನತೆಗೆ ಕಲ್ಪಿಸಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ನಗರದ ಅಭಿವೃದ್ದಿ ಕುಂಟಿತಗೊಂಡಿತ್ತು. ಅದಕ್ಕಾಗಿ ನಗರದಲ್ಲಿ ಮತ್ತೆ ಬಿಜೆಪಿ ಶಾಸಕರನ್ನು ಜನತೆ ಆಐಕೆ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಬಿಜೆಪಿ ಅಭ್ಯರ್ಥಿಗಳನ್ನು ಗೆಲಿಸಿ ಅಧಿಕಾರಕ್ಕೆ ತಂದರೆ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲಿದೆಂದು ಸಚಿವ ಶ್ರೀರಾಮುಲು, ಹೇಳಿದರು.
ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ ಈಗಾಗಲೇ ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಅವರು ಸ್ಪಂದಿಸುವುದಾಗಿ ಮುಂದಿನ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಬಳ್ಳಾರಿ ಸೇರಲಿದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಾರ್ಡುಗಳಲ್ಲಿ ಸ್ಪರ್ಧೆ ಮಾಡಬೇಕೆಂಬ ಬಯಕೆ ಹಲವರಲ್ಲಿ ಇರುತ್ತೆ. ಆದರೆ ಒಬ್ಬರಿಗೆ ಮಾತ್ರ ಟಿಕೆಟ್ ದೊರಡೆಯಲಿದೆ. ಸೂಕ್ತ ಅಭ್ಯರ್ಥಿಯನ್ನು ಪರಿಗಣಿಸಿ ಪಕ್ಷ ಟಿಕೆಟ್ ನೀಡಲಿದೆ. ಟಿಕೆಟ್ ದೊರೆಯದಿದ್ದವರು. ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೆ ಭಿನ್ನಮತ ಬೇಡ, ಇನ್ನೊಂದು ಪಕ್ಷದ ಮುಖಂಡರ ಮಾತಿಗೆ ಮರುಳಾಗಬೇಡಿ ಎಂದರು.